ಮೈಸೂರಿನಲ್ಲಿರುವ ಮಾವನ ಮನೆಗೆ ಭೇಟಿ ನೀಡಿದ ಡಿ.ಕೆ.ಶಿವಕುಮಾರ್

DKshi

ಮೈಸೂರು, ಆ.30-ಐಟಿ ದಾಳಿ ನಂತರ ಇದೇ ಪ್ರಥಮ ಬಾರಿಗೆ ಇಂಧನ ಸಚಿವ ಡಿ.ಕೆ.ಶಿವಕುಮಾರ್ ಮೈಸೂರಿನಲ್ಲಿರುವ ತಮ್ಮ ಮಾವ ತಿಮ್ಮಯ್ಯನವರ ಮನೆಗೆ ಭೇಟಿ ನೀಡಿದರು. ಬೆಳಗ್ಗೆ ಸುಮಾರು 9 ಗಂಟೆ ಸಮಯದಲ್ಲಿ ನಗರದ ಇಟ್ಟಿಗೆ ಗೂಡಿನಲ್ಲಿರುವ ಮಾವ ತಿಮ್ಮಯ್ಯನವರ ಮನೆಗೆ ಡಿ.ಕೆ.ಶಿವಕುಮಾರ್ ಭೇಟಿ ನೀಡಿ ಸುಮಾರು ಅರ್ಧಗಂಟೆಗೂ ಹೆಚ್ಚು ಕಾಲ ಅವರೊಂದಿಗೆ ಮಾತುಕತೆ ನಡೆಸಿದರು.

ಡಿ.ಕೆ.ಶಿವಕುಮಾರ್ ಅವರ ನಿವಾಸದ ಮೇಲೆ ಐಟಿ ದಾಳಿ ನಡೆದ ಸಂದರ್ಭದಲ್ಲಿ ತಿಮ್ಮಯ್ಯ ಅವರ ಮನೆಯ ಮೇಲೂ ದಾಳಿ ನಡೆದಿತ್ತು. ಈ ಮೊದಲು ಡಿ.ಕೆ.ಶಿವಕುಮಾರ್ ಮಾವನ ಮನೆಗೆ ಬಂದಿದ್ದರು. ಆದರೆ ದಾಳಿ ನಂತರ ಇದೇ ಪ್ರಥಮ ಬಾರಿಗೆ ಬಂದಿದ್ದಾರೆ. ಮಾವನ ಮನೆಯಿಂದ ನೇರ ಚಾಮುಂಡಿ ಬೆಟ್ಟಕ್ಕೆ ತೆರಳಿದ ಡಿ.ಕೆ.ಶಿವಕುಮಾರ್ ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದರು.

Facebook Comments

Sri Raghav

Admin