ಲಿಂಗಾಯತ ಸ್ವತಂತ್ರ ಧರ್ಮಕ್ಕೆ ಬಿಗಿ ಪಟ್ಟು

ಈ ಸುದ್ದಿಯನ್ನು ಶೇರ್ ಮಾಡಿ

Lingayat

ಬೆಂಗಳೂರು, ಆ.30-ಮತ್ತೆ ಪ್ರತ್ಯೇಕ ಲಿಂಗಾಯತ ಧರ್ಮದ ಕೂಗು ಜೋರಾಗಿದ್ದು, ವೀರಶೈವ ಮತ್ತು ಲಿಂಗಾಯತ ಬೇರೆ ಬೇರೆ ಎಂಬ ನಿರ್ಣಯ ತೆಗೆದುಕೊಳ್ಳಲು ಇಂದು ಸಭೆ ನಡೆಸಲಾಯಿತು. ಲಿಂಗಾಯತ ಪ್ರತ್ಯೇಕ ಧರ್ಮಕ್ಕೆ ಆಗ್ರಹಿಸಿ ರುದ್ರಾಕ್ಷಿ ಮಠದ ಶ್ರೀ ಸಿದ್ದೇಶ್ವರ ಸ್ವಾಮೀಜಿ, ಶ್ರೀ ನಿಜಗುಣಾನಂದ ತೋಂದಾರ್ಯ ಸ್ವಾಮೀಜಿ, ಶ್ರೀ ಶಿವರುದ್ರ ಸ್ವಾಮೀಜಿ ಸೇರಿದಂತೆ ವಿವಿಧ ಮಠಾಧೀಶರ ಸಮ್ಮುಖದಲ್ಲಿ ಸಭೆಯನ್ನು ನಡೆಸಲಾಯಿತು.

ಪ್ರತ್ಯೇಕ ಲಿಂಗಾಯತ ಧರ್ಮದ ವಿಚಾರವಾಗಿ ಹಲವು ನಿರ್ಣಯಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಲ್ಲಿಸಲು ತೀರ್ಮಾನಿಸ ಲಾಯಿತು. ಇತ್ತೀಚೆಗಷ್ಟೆ ಲಿಂಗಾಯತ-ವೀರಶೈವ ಎರಡೂ ಒಂದೇ ಎಂದು ಸಭೆ ನಡೆಸಿ ರಂಭಾಪುರ ಶ್ರೀಗಳ ನೇತೃತ್ವದಲ್ಲಿ 500ಕ್ಕೂ ಹೆಚ್ಚು ಸ್ವಾಮೀಜಿಗಳು ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದ್ದರು. ಸಭೆಯನ್ನುದ್ದೇಶಿ ಶ್ರೀ ಶಿವರುದ್ರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಲಿಂಗಾಯತ ಒಂದೇ ಧರ್ಮ ಉಳಿದೆಲ್ಲವು ಮತಗಳು ಅಷ್ಟೆ. ಭಕ್ತಿ ಎಂದರೆ ವಿಭೂತಿ, ಕಾಯಿ ಒಡೆಯುವುದಲ್ಲ. ಭಕ್ತಿಯಿಂದಲೇ ಚಿಂತನೆ, ಆಲೋಚನೆ, ಸಮಾನತೆ ಇದನ್ನೇ ಬಸವಣ್ಣನವರು ಹೇಳಿದ್ದು , ಎಲ್ಲಾ ಹೂಗಳ ಮಕರಂದವನ್ನು ಜೇನು ಸಂಗ್ರಹಿಸುತ್ತದೆ. ಅದೇ ರೀತಿ ಎಲ್ಲಾ ವರ್ಗಗಳನ್ನು ಒಟ್ಟಿಗೆ ಸೇರಿಸುವ ಲಿಂಗಾಯತ ಧರ್ಮ. ಹಾಗಾಗಿ ಲಿಂಗಾಯಿತವನ್ನು ಮತ ಎನ್ನ ಬಾರದು. ಧರ್ಮ ಎನ್ನಬೇಕು. ಬಸವಣ್ಣನವರ ತತ್ವವನ್ನು ಬಿಟ್ಟು , ನಾವು ಸ್ವಾರ್ಥದ ಹಿಂದೆ ಬಿದ್ದಿದ್ದೇವೆ ಎಂದರು.

ನಮ್ಮ ಸ್ವಾರ್ಥಕ್ಕಾಗಿ ಸ್ವತಂತ್ರ ಧರ್ಮಕ್ಕೆ ಆಗ್ರಹಿಸುತ್ತಿಲ್ಲ. ಇದು ನಮ್ಮ ಜನ್ಮ ಸಿದ್ದ ಹಕ್ಕು. ಎಸ್‍ಸಿ-ಎಸ್‍ಟಿ ರೀತಿ ನಮಗೂ ಸೌಲಭ್ಯ ಸಿಗಬೇಕು ಎಂದು ಕೇಳುತ್ತಿಲ್ಲ ಎಂದರು. ಪ್ರಥಮ ಬಾರಿಗೆ ಸಭೆಯಲ್ಲಿ ಪಾಲ್ಗೊಂಡಿದ್ದ ನಟ ಚೇತನ್ ಯಡಿಯೂರಪ್ಪ ವಿರುದ್ಧ ವಾಗ್ದಾಳಿ ನಡೆಸಿ ನೀವು ನಿಮ್ಮ ಸ್ವಾರ್ಥ ರಾಜಕೀಯ ನಿಲ್ಲಿಸಿ, ಬಸವಣ್ಣನವರನ್ನು ಗೌರವಿಸಿ ಎಂದಾಗ, ಸಭೆಯಲ್ಲಿ ಗಲಾಟೆ-ಗದ್ದಲ ನಡೆಯಿತು.
ಇಲ್ಲಿ ರಾಜಕೀಯ ತರಬೇಡಿ ಎಂದು ಲಿಂಗಾಯತ ಅನುಯಾಯಿಗಳು ಸಭೆಯಿಂದ ಪ್ರಸಂಗವೂ ನಡೆಯಿತು. ಲಿಂಗಾಯತರಿಗೆ ಪ್ರತ್ಯೇಕ ಧರ್ಮ ಮತ್ತು ಅಲ್ಪಸಂಖ್ಯಾತ ಸ್ಥಾನಮಾನ ಕಲ್ಪಿಸಿಕೊಡಲು ಕೇಂದ್ರ ಸರ್ಕಾರಕ್ಕೆ ಅವಕಾಶವಿದೆ.

ರಾಷ್ಟ್ರೀಯ ಅಲ್ಪಸಂಖ್ಯಾತ ಆಯೋಗದ ಕಾಯ್ದೆ 1992ರ 2/3ರಡಿ ಹಾಗೂ ರಾಷ್ಟ್ರೀಯ ಅಲ್ಪಸಂಖ್ಯಾತರ ಶಿಕ್ಷಣ ಸಂಸ್ಥೆಗಳ ಕಾಯ್ದೆ 2004ರ ಸೆಕ್ಷನ್ 2(ಎಫ್) ಅನ್ವಯ ಹಿಂದಿನ ಯುಪಿಎ ಸರ್ಕಾರ 2004ರಲ್ಲಿ ಜೈನರಿಗೆ ಅಲ್ಪಸಂಖ್ಯಾತ ಸ್ಥಾನಮಾನ ಕಲ್ಪಿಸಿತ್ತು.
ಈ ಮೂಲಕ ಜೈನರು, ಮುಸ್ಲಿಂ, ಕ್ರಿಶ್ಚಿಯನ್ನರಂತೆ ಮೀಸಲಾತಿ ಸೌಲಭ್ಯ ಪಡೆಯಲು ಸಾಧ್ಯವಾಯಿತು. ಅದರಂತೆ ಲಿಂಗಾಯತ ಧರ್ಮ ವನ್ನು ಸ್ವತಂತ್ರ ಧರ್ಮವೆಂದು ಪರಿಗಣಿಸಿ ಅಲ್ಪಸಂಖ್ಯಾತ ಸ್ಥಾನಮಾನ ನೀಡುವ ಕುರಿತು ಸರ್ಕಾರದ ಹಂತದಲ್ಲಿ ಕಾನೂನಿನಡಿಯಲ್ಲಿ ಅಗತ್ಯ ಕ್ರಮಕೈಗೊಂಡು ಸೂಕ್ತ ಶಿಫಾರಸ್ಸಿನೊಂದಿಗೆ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ವೇದಿಕೆ ಒತ್ತಾಯಿಸಿದೆ.

Facebook Comments

Sri Raghav

Admin