ಸಹಜ ಸ್ಥಿತಿಯತ್ತ ಮರಳಿದ ಹರಿಯಾಣ, ಪಂಜಾಬ್

ಈ ಸುದ್ದಿಯನ್ನು ಶೇರ್ ಮಾಡಿ

baba-021

ಚಂಡೀಗಢ, ಆ.30-ಅತ್ಯಾಚಾರ ಪ್ರಕರಣದಲ್ಲಿ ಡೇರಾ ಸಚ್ಚಾ ಸೌಧ ಮುಖ್ಯಸ್ಥ ಗುರ್ಮೀತ್ ರಾಮ್ ರಹೀಂ ಸಿಂಗ್ ದೋಷಿ ಎಂದು ಸಿಬಿಐ ವಿಶೇಷ ನ್ಯಾಯಾಲಯ ಘೋಷಿಸಿದ ವ್ಯಾಪಕ ಹಿಂಸಾಚಾರಕ್ಕೆ ಸಾಕ್ಷಿಯಾಗಿದ್ದ ಹರಿಯಾಣ ಮತ್ತು ಪಂಜಾಬ್ ಸಹಜ ಸ್ಥಿತಿಯತ್ತ ಮರಳುತ್ತಿದೆ. ಶೈಕ್ಷಣಿಕ ಸಂಸ್ಥೆಗಳು ಹಾಗೂ ಅಂಗಡಿ-ಮುಂಗಟ್ಟುಗಳು ಪುನರಾರಂಭಗೊಂಡಿವೆ. ಸಾರಿಗೆ ವ್ಯವಸ್ಥೆ ಮತ್ತು ವಾಹನಗಳ ಸಂಚಾರ ಆರಂಭಗೊಂಡಿದೆ.

ಆದಾಗ್ಯೂ ಎರಡೂ ರಾಜ್ಯಗಳ ಸೂಕ್ಷ್ಮ ಪ್ರದೇಶಗಳಲ್ಲಿ ಭದ್ರತಾಪಡೆಗಳ ಭದ್ರತೆ ಮುಂದುವರಿದಿದೆ.  ರೋಹ್ಟಕ್ ಕಾರಾಗೃಹದಲ್ಲಿ ಬಾಬಾಗೆ ಸಿಬಿಐ ವಿಶೇಷ ನ್ಯಾಯಾಧೀಶರು ಎರಡು ಅತ್ಯಾಚಾರ ಪ್ರಕರಣಗಳಲ್ಲಿ 20 ವರ್ಷ ಜೈಲು ಶಿಕ್ಷೆ ತೀರ್ಪು ನೀಡಿದರು. ಬಾಬಾ ಜೈಲು ಪಾಲಾಗುತ್ತಿದ್ದಂತೆ ಇತ್ತ ಆತನ ಅನುಯಾಯಿಗಳು ಮತ್ತು ಬೆಂಬಲಿಗರು ತಣ್ಣಗಾಗಿದ್ದಾರೆ.  ಹಿಂಸಾಚಾರಕ್ಕೆ 37 ಮಂದಿ ಬಲಿಯಾಗಿ, 400ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು.  ಸಾರ್ವಜನಿಕ ಅಸ್ತಿ-ಪಾಸ್ತಿ, ರೈಲು ಮತ್ತು ಇತರ ವಾಹನಗಳಿಗೆ ಢೇರಾ ಬೆಂಬಲಿಗರು ಬೆಂಕಿ ಹಚ್ಚಿ ಭಾರೀ ಪ್ರಮಾಣದ ಹಾನಿ ಉಂಟು ಮಾಡಿದ್ದರು.

Facebook Comments

Sri Raghav

Admin