ಸುನಂದಾ ಸಾವು ಪ್ರಕರಣ, ಪೊಲೀಸರಿಗೆ ಹೈಕೋರ್ಟ್ ತರಾಟೆ

ಈ ಸುದ್ದಿಯನ್ನು ಶೇರ್ ಮಾಡಿ

Sunanada-Pushkar--01

ನವದೆಹಲಿ, ಆ.30-ರಾಜಕಾರಣಿ ಮತ್ತು ಉದ್ಯಮಿ ಶಶಿ ತರೂರ್ ಅವರ ಪತ್ನಿ ಸುನಂದಾ ಪುಷ್ಕರ್ ಸಾವು ಪ್ರಕರಣದಲ್ಲಿ ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿರುವ ದೆಹಲಿ ಪೊಲೀಸರಿಗೆ ಹೈಕೋರ್ಟ್ ತೀವ್ರ ತರಾಟೆ ತೆಗೆದುಕೊಂಡಿದೆ. ಈ ಪ್ರಕರಣ ಕುರಿತ ವಿಚಾರಣೆ ವೇಳೆ ದೆಹಲಿ ಹೈಕೋರ್ಟ್ ಪೊಲೀಸರಿಗೆ ಕೆಲವು ಪ್ರಶ್ನೆಗಳನ್ನು ಕೇಳಿದೆ. ಸುನಂದಾ ಸಾವು ಸಂಭವಿಸಿ ಮೂರುವರೆ ವರ್ಷಗಳಾದರೂ ಏಕೆ ತನಿಖಾ ವರದಿ ಸಲ್ಲಿಸಿಲ್ಲ, ಈ ತನಕ ಆರೋಪ ಪಟ್ಟಿ ಸಲ್ಲಿಸದಿರಲು ಕಾರಣವೇನು ಎಂದು ಉತ್ತರ ಬಯಸಿತು.

ಎಸ್‍ಐಟಿ ವರದಿಯನ್ನೂ ಏಕೆ ಈವರೆಗೆ ಕೋರ್ಟ್‍ಗೆ ಸಲ್ಲಿಸಿಲ್ಲ ಎಂದು ಪ್ರಶ್ನಿಸಿದ ನ್ಯಾಯಾಲಯವು ತನಿಖೆ ಪ್ರಗತಿ ಬಗ್ಗೆ ಪೂರ್ಣ ಮಾಹಿತಿ ಒದಗಿಸುವಂತೆ ಸೂಚಿಸಿದೆ. ಇನ್ನು ಎರಡು ವಾರಗಳಲ್ಲಿ ಆಕೆಯ ಸಾವಿನ ವೈದ್ಯಕೀಯ ವರದಿಯನ್ನು ಸಲ್ಲಿಸಬೇಕು ಎಂದು ಕೋರ್ಟ್ ಸೂಚಿಸಿತು.

Facebook Comments

Sri Raghav

Admin