5ನೇ ಮಹಡಿಯಿಂದ ಹಾರಿ ಆದಾಯ ತೆರಿಗೆ ಇಲಾಖೆ ಉದ್ಯೋಗಿ ಆತ್ಮಹತ್ಯೆ

Suicide-Building--01

ಬೆಂಗಳೂರು, ಆ.30- ಆದಾಯ ತೆರಿಗೆ ಇಲಾಖೆ ಉದ್ಯೋಗಿಯೊಬ್ಬರು ಕಾರ್ಪೊರೇಷನ್ ಬಳಿಯಿರುವ ಯುನಿಟಿ ಬಿಲ್ಡಿಂಗ್‍ನ 5ನೇ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಇಂದು ಮಧ್ಯಾಹ್ನ ನಡೆದಿದೆ. ಜಯರಾಮ್ (53) ಆತ್ಮಹತ್ಯೆ ಮಾಡಿಕೊಂಡಿರುವ ಉದ್ಯೋಗಿ. ಯುನಿಟಿ ಬಿಲ್ಡಿಂಗ್ ಪಕ್ಕದ ಅನೇಕ್ಸ್ ಕಾಂಪ್ಲೆಕ್ಸ್‍ನಲ್ಲಿ ಆದಾಯ ತೆರಿಗೆ ಕಚೇರಿಯಿದ್ದು, ಇಲ್ಲಿ ಡಿ ಗ್ರೂಪ್ ನೌಕರರಾಗಿ ಸೇವೆ ಸಲ್ಲಿಸುತ್ತಿದ್ದರು. ಎಂದಿನಂತೆ ಇಂದು ಬೆಳಗ್ಗೆ ಜಯರಾಮ್ ಅವರು ಕಚೇರಿಗೆ ಬಂದಿದ್ದಾರೆ. ಆದರೆ, ಏನಾಯಿತೋ ಏನೋ ಗೊತ್ತಿಲ್ಲ. ಇಂದು ಮಧ್ಯಾಹ್ನ 12.30ರ ಸಂದರ್ಭದಲ್ಲಿ 5ನೆ ಮಹಡಿಗೆ ತೆರಳಿದ ಇವರು ಅಲ್ಲಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಘಟನೆಗೆ ಕಾರಣ ತಿಳಿದುಬಂದಿಲ್ಲ.

Facebook Comments

Sri Raghav

Admin