ಅಮೆರಿಕದಲ್ಲಿ ಚೂರಿಯಿಂದ ಇರಿದು ಸಿಖ್ ಯುವಕ ಕಗ್ಗೊಲೆ

ಈ ಸುದ್ದಿಯನ್ನು ಶೇರ್ ಮಾಡಿ

Gagandeep-Singh--01

ವಾಷಿಂಗ್ಟನ್, ಆ.31-ಅಮೆರಿಕದ ಇಹಾಡೋ ರಾಜ್ಯದ ಬಾನರ್ ಕೌಂಟಿಯಲ್ಲಿ ನಿನ್ನೆ ಸಿಖ್ ಯುವಕನಿಗೆ ಚೂರಿಯಿಂದ ಇರಿದು ಕಗ್ಗೊಲೆ ಮಾಡಲಾಗಿದೆ. ಅವರ ಕಾರಿನಲ್ಲಿದ್ದ ಸಹ ಪ್ರಯಾಣಿಕನೇ ಈ ಕೊಲೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಅಂತಿಮ ವರ್ಷ ಎಂಜಿನಿಯರಿಂಗ್ ವಿದ್ಯಾರ್ಥಿ ಗಗನ್‍ದೀಪ್ ಸಿಂಗ್ (22) ಕೊಲೆಯಾದ ಯುವಕ. 19 ವರ್ಷದ ಜಾಕೋಬ್ ಕೋಲ್‍ಮನ್ ಹತ್ಯೆ ಮಾಡಿದ್ದಾನೆ.  ಸಿಯಾಟಲ್‍ನಿಂದ ಸ್ಟೋಕೇನ್ ಅಂತಾರಾಷ್ಟ್ರೀಯ ವಿಮಾನನಿಲ್ದಾಣಕ್ಕೆ ಬಂದಿಳಿದ ಜಾಕೋಬ್‍ನನ್ನು ಗಗನ್‍ದೀಪ್ ತನ್ನ ಕಾರಿನಲ್ಲಿ ಕರೆದೊಯ್ಯುವಾಗ ಈ ಕೃತ್ಯ ನಡೆದಿದೆ. ಕೊಲೆಗೆ ಕಾರಣ ತಿಳಿದುಬಂದಿಲ್ಲ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ತೀವ್ರಗೊಳಿಸಿದ್ದಾರೆ.

Facebook Comments

Sri Raghav

Admin