ಇಸ್ರೋದಿಂದ ಬದಲಿ ಉಪಗ್ರಹ ಯಶಸ್ವಿ ಉಡಾವಣೆ

ಈ ಸುದ್ದಿಯನ್ನು ಶೇರ್ ಮಾಡಿ

ISRO--10

ನವದೆಹಲಿ, ಆ.31-ಭಾರತೀಯ ಪ್ರಾದೇಶಿಕ ಪಥ ನಿರ್ದೇಶನ ಉಪಗ್ರಹ ವ್ಯವಸ್ಥೆ (ಐಆರ್‍ಎನ್‍ಎಸ್‍ಎಸ್) ಸರಣಿಯ ಎಂಟನೇ ಉಪಗ್ರಹ ಐಆರ್‍ಎನ್‍ಎಸ್‍ಎಸ್-1ಎಚ್ ಇಂದು ಯಶ್ವಸಿಯಾಗಿ ಅಂತರಿಕ್ಷಕ್ಕೆ ಉಡಾವಣೆಯಾಗಿದೆ. ಇದನ್ನು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ-ಇಸ್ರೋದ ಬದಲಿ ಉಪಗ್ರಹ ಎಂದೇ ಬಣ್ಣಿಸಲಾಗಿದೆ. ಆಂಧ್ರಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಎರಡನೇ ಉಡಾವಣಾ ವೇದಿಕೆಯಿಂದ ಇಂದು ಮಧಾಹ್ಯ 2 ಗಂಟೆಗೆ ಯಶಸ್ವಿಯಾಗಿ ನಭಕ್ಕೆ ಹಾರಿಸಲಾಯಿತು ಎಂದು ಇಸ್ರೋ ವಿಜ್ಞಾನಿಗಳು ತಿಳಿಸಿದ್ದಾರೆ.

ಎಲ್ಲ ಮೂರು ಪರಮಾಣು ಗಡಿಯಾರಗಳು ವಿಫಲವಾದ ಹಿನ್ನೆಲೆಯಲ್ಲಿ ಐಆರ್‍ಎನ್‍ಎಸ್‍ಎಸ್-1ಎನ್ ಸ್ಥಾನದಲ್ಲಿ ಈ ಉಪಗ್ರಹ ಕಾರ್ಯನಿರ್ವಹಿಸಲಿದೆ. 1 ,425 ಕೆ.ಜಿ.ತೂಕದ ಉಪಗ್ರಹ ಪಿಎಸ್‍ಎಲ್‍ವಿ-ಸಿ39ರಿಂದ ಯಶಸ್ವಿಯಾಗಿ ಉಡಾವಣೆಗೊಂಡಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.

Facebook Comments

Sri Raghav

Admin