ಕೇಂದ್ರ ಗೃಹ ಕಾರ್ಯದರ್ಶಿಯಾಗಿ ರಾಜೀವ್ ಪದಗ್ರಹಣ

ಈ ಸುದ್ದಿಯನ್ನು ಶೇರ್ ಮಾಡಿ

Rajiv-Gauba

ನವದೆಹಲಿ, ಆ.31-ಕೇಂದ್ರ ಗೃಹ ಕಾರ್ಯದರ್ಶಿಯಾಗಿ ಹಿರಿಯ ಐಎಎಸ್ ಅಧಿಕಾರಿ ರಾಜೀವ್ ಗೌಬಾ ಇದು ಅಧಿಕಾರ ಸ್ವೀಕರಿಸಿದರು. ರಾಜೀವ್ ಮಹರ್ಷಿ ನಿನ್ನೆ ಸೇವೆಯಿಂದ ನಿವೃತ್ತರಾದ ನಂತರ ಪದಗ್ರಹಣ ಮಾಡಿರುವ ಗೌಬಾ ಎರಡು ವರ್ಷಗಳ ಕಾಲ ಹೊಸ ಹುದ್ದೆಯಲ್ಲಿ ಮುಂದುವರಿಯಲಿದ್ದಾರೆ.
ಜಾರ್ಖಂಡ್ ಕೇಡರ್‍ನ 1982ರ ಬ್ಯಾಚ್ ಐಎಎಸ್ ಅಧಿಕಾರಿಯಾಗಿರುವ 59 ವರ್ಷದ ಗೌಬಾ ಈ ಹಿಂದೆ ಗೃಹ ಸಚಿವಾಲಯದಲ್ಲಿ ವಿಶೇಷ ಕರ್ತವ್ಯಾಧಿಕಾರಿಯಾಗಿ, ಹೆಚ್ಚುವರಿ ಕಾರ್ಯದರ್ಶಿಯಾಗಿ ಹಾಗೂ ಕೇಂದ್ರ ನಗರಾಭಿವೃದ್ದಿ ಸಚಿವಾಲಯದಲ್ಲಿ ಕಾರ್ಯದರ್ಶಿಯಾಗಿ ಕರ್ತವ್ಯ ನಿರ್ವಹಿಸಿದ್ದರು.

Facebook Comments

Sri Raghav

Admin