ಚಿರತೆ ಬಂತು ಅಂತಾ ರಾತ್ರಿಯೆಲ್ಲಾ ನಿದ್ದೆಗೆಟ್ಟ ಜನ

ಈ ಸುದ್ದಿಯನ್ನು ಶೇರ್ ಮಾಡಿ

chirate

ತುಮಕೂರು, ಆ.31- ಚಿರತೆ ಬಂತು ಚಿರತೆ ಓಡ್ರಪ್ಪೋ … ಓಡ್ರಿ ಎಂಬ ಸುದ್ದಿಗೆ ನಗರದ ಜನತೆ ರಾತ್ರಿಯಿಡೀ ಭೀತಿಗೊಂಡು ಪರದಾಡಿದ ಪ್ರಸಂಗ ನಡೆಯಿತು.ಮಂಜುನಾಥನಗರ, ಸಿದ್ದರಾಮೇಶ್ವರ ಬಡಾವಣೆ, ಜಯನಗರ ಸೇರಿದಂತೆ ನಗರದ ಕೆಲವು ಕಡೆ ಚಿರತೆ ಕಾಣಿಸಿಕೊಂಡಿದೆ ಎಂಬ ಸುದ್ದಿ ಕಾಡ್ಗಿಚ್ಚಿನಂತೆ ಹಬ್ಬಿ ಜನತೆ ತಲ್ಲಣಗೊಂಡಿದ್ದರು. ನಗರದ ಹೃದಯ ಭಾಗದಲ್ಲಿರುವ ಶಾಸಕ ರಫೀಕ್ ಅಹಮ್ಮದ್ ಅವರ ಮನೆಯ ಸಮೀಪ ಚಿರತೆ ಕಾಣಿಸಿಕೊಂಡಿದೆ ಎಂಬ ಕರೆ ಅರಣ್ಯ ಇಲಾಖೆಗೆ ಹೋಗಿದೆ. ಬೆಂಗಳೂರಿನಲ್ಲಿದ್ದ ಶಾಸಕರಿಗೂ ವಿಷಯ ತಿಳಿಸಿದ್ದರಿಂದ ಕೂಡಲೇ ಕಾರ್ಯಾಚರಣೆ ನಡೆಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಅರಣ್ಯ ಇಲಾಖೆ ಸಿಬ್ಬಂದಿಗಳು ಪೊಲೀಸರ ಸಹಾಯದೊಂದಿಗೆ ಸ್ಥಳಕ್ಕೆ ದಾವಿಸಿ ರಾತ್ರಿಯಿಡೀ ಕಾರ್ಯಾಚರಣೆ ನಡೆಸಿದರೂ ಎಲ್ಲೂ ಚಿರತೆ ಕಾಣಿಸಿಕೊಳ್ಳದ ಹಿನ್ನೆಲೆಯಲ್ಲಿ ಇದು ಕಿಡಿಗೇಡಿಗಳ ಕೃತ್ಯವಿರಬಹುದು ಎಂದು ಶಂಕಿಸಿ ಕಾರ್ಯಾಚರಣೆಯನ್ನು ಇಂದು ಬೆಳಗ್ಗೆ ಸ್ಥಗಿತಗೊಳಿಸಿದರು. ಒಟ್ಟಾರೆ ಕಿಡಿಗೇಡಿಗಳು ಹಬ್ಬಿಸಿದ ವದಂತಿಗೆ ನಗರದ ಜನತೆ ರಾತ್ರಿಯಿಡೀ ನಿದ್ದೆಗೆಟ್ಟು ಪರದಾಡಿದ್ದು ಸತ್ಯ.

Facebook Comments

Sri Raghav

Admin