ತಲೆಬುರುಡೆ ರಹಿತ ಭ್ರೂಣ ಗರ್ಭಪಾತಕ್ಕೆ ಸುಪ್ರೀಂ ಸಮ್ಮತಿ

ಈ ಸುದ್ದಿಯನ್ನು ಶೇರ್ ಮಾಡಿ

foetus

ನವದೆಹಲಿ, ಆ.31-ತಲೆಬುರುಡೆ ಅಥವಾ ಮೆದುಳು ಇಲ್ಲದ 24 ವಾರಗಳ ಭ್ರೂಣ(ಬೆಳೆಯುತ್ತಿರುವ ಶಿಶು) ಎಂಬ ಕಾರಣಕ್ಕಾಗಿ ಗರ್ಭಪಾತಕ್ಕೆ ಅನುಮತಿ ನೀಡಬೇಕೆಂದು ಕೋರಿ ಮಹಿಳೆಯೊಬ್ಬಳು ಸಲ್ಲಿಸಿದ್ದ ಮನವಿಯನ್ನು ಸುಪ್ರೀಂಕೋರ್ಟ್ ಮಾನ್ಯ ಮಾಡಿದೆ. ನ್ಯಾಯಮೂರ್ತಿಗಳಾದ ಎಲ್.ನಾಗೇಶ್ವರ ರಾವ್ ಮತ್ತು ಎಸ್.ಎ.ಬೊಬ್ಡೆ ಅವರನ್ನು ಒಳಗೊಂಡ ಪೀಠವು, ಅಸಾಧಾರಣ ಸಮಸ್ಯೆಗಳಿರುವ ಆರು ತಿಂಗಳ ಭ್ರೂಣವನ್ನು ತೆಗೆಸಲು ಪುಣೆ ಮೂಲದ 20 ವರ್ಷದ ಮಹಿಳೆಗೆ ಅವಕಾಶ ನೀಡಿದೆ.

24 ವಾರಗಳ ಭ್ರೂಣವು ರುಂಡ ಹೊಂದಿಲ್ಲ ಹಾಗೂ ಇದಕ್ಕೆ ಚಿಕಿತ್ಸೆ ಇಲ್ಲ ಎಂಬುದನ್ನು ಪುಣೆ ವೈದ್ಯಕೀಯ ಮಂಡಳಿ ನೀಡಿದ ವರದಿ ಆಧಾರದ ಮೇಲೆ ಈ ತೀರ್ಪು ಅವಲಂಬಿಸಿದೆ ಎಂದು ಸುಪ್ರೀಂಕೋರ್ಟ್ ತಿಳಿಸಿದೆ. 20 ವಾರಗಳ ಬಳಿಕ ಭ್ರೂಣದ ಗರ್ಭಪಾತವು ಎಂಟಿಪಿ ಅಧಿನಿಯಮದ ಸೆಕ್ಷನ್ 3(2)ಬಿ ಅಡಿ ನಿಷೇಧ. ಆದರೆ ತೀರಾ ಅಪರೂಪ ಮತ್ತು ತಾಯಿಯ ಜೀವಕ್ಕೆ ತೊಂದರೆ ಇದ್ದಲ್ಲಿ ನಿಯಮ ಸಡಿಸಲು ಕಾನೂನಿನಲ್ಲಿ ಅವಕಾಶ ಇದೆ. ಶಿಶುವಿನ ತಲೆಬುರುಡೆ ಪೂರ್ಣಪ್ರಮಾಣದಲ್ಲಿ ರೂಪುಗೊಂಡಿಲ್ಲ. ಈ ಶಿಶು ಸಜೀವವಾಗಿ ಜನಿಸಿದರೆ ಬದುಕಿ ಉಳಿಯಲಾರದು. ಈ ಹಿನ್ನೆಲೆಯಲ್ಲಿ ಗರ್ಭಪಾತಕ್ಕೆ ಅನುಮತಿ ನೀಡಬೇಕೆಂದು ಮಹಿಳೆ ಸುಪ್ರೀಂಕೋರ್ಟ್ ಮೊರೆ ಹೋಗಿದ್ದಳು.

ಪುಣೆಯ ಬಿ.ಜೆ. ಮೆಡಿಕಲ್ ಕಾಲೇಜಿನಲ್ಲಿ ವೈದ್ಯಕೀಯ ಮಂಡಳಿ ಸ್ಥಾಪಿಸಿ ಈ ಬಗ್ಗೆ ಪರಿಶೀಲಿಸಿ ವರದಿ ನೀಡುವಂತೆ ಸುಪ್ರೀಂ ಕೋರ್ಟ್ ಸೂಚಿಸಿತ್ತು.
ಸುಪ್ರೀಂಕೋರ್ಟ್ ನಿರ್ದೇಶನಗಳಿಗೆ ಅನುಗುಣವಾಗಿ ಇಂಥ ಗರ್ಭಪಾತ ಪ್ರಕರಣಗಳಲ್ಲಿ ವ್ಯವಹರಿಸಲು ವೈದ್ಯಕೀಯ ಮಂಡಳಿಯನ್ನು ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಸ್ಥಾಪಿಸುವಂತೆ ಕೇಂದ್ರ ಸರ್ಕಾರವು ಸರ್ವೋಚ್ಛ ನ್ಯಾಯಾಲಯಕ್ಕೆ ಮನವಿ ಮಾಡಿದೆ.

Facebook Comments

Sri Raghav

Admin