ನಾನು ಯಾರನ್ನೂ ಟಾರ್ಗೆಟ್ ಮಾಡಿಲ್ಲ : ಸತೀಶ್ ಜಾರಕಿಹೊಳಿ ಸ್ಪಷ್ಟನೆ

Satish-Jarakihole

ಬೆಂಗಳೂರು, ಆ.31- ಬೆಳಗಾವಿಯಲ್ಲಿ ಸೀರೆ ಹಂಚಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಸತೀಶ್ ಜಾರಕಿಹೊಳಿ ಸ್ಪಷ್ಟನೆ ನೀಡಿದ್ದು, ನಾನು ಯಾರನ್ನೂ ಟಾರ್ಗೆಟ್ ಮಾಡಿ ಹೇಳಿಲ್ಲ ಎಂದು ತಿಳಿಸಿದ್ದಾರೆ. ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ಅವರು, ನಮ್ಮ ಜಿಲ್ಲೆಯಲ್ಲಿ ಕೆಲವರು ಸೀರೆ, ಬಂಗಾರ, ದುಡ್ಡು ಹಂಚುತ್ತಿದ್ದರು. ಕೆಲವರು 70ರೂ. ಸೀರೆ ಹಂಚಿದರೆ ನಾನು 200ರೂ. ಸೀರೆ ಹಂಚುತ್ತೇನೆ ಅದೇನು ದೊಡ್ಡದಲ್ಲ ಎಂದು ನಾನು ಹೇಳಿದ್ದೆ. ಆದರೆ, ನಾನು ಯಾರನ್ನೂ ಟಾರ್ಗೆಟ್ ಮಾಡಿರಲಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಬೆಳಗಾವಿಯಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್ ಮತ್ತು ಜಾರಕಿಹೊಳಿ ನಡುವೆ ಭಿನ್ನಮತ ಉಲ್ಬಣಗೊಂಡಿದೆ. ಇತ್ತೀಚೆಗೆ ನಡೆದ ಕಾರ್ಯಕ್ರಮವೊಂದರಲ್ಲಿ ಹೆಬ್ಬಾಳ್ಕರ್ ಅವರ ವತಿಯಿಂದ ಸೀರೆಗಳನ್ನು ಹಂಚಲಾಗಿದೆ ಎಂದು ಕೇಳಿಬಂದಿತ್ತು. ಇದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದ ಸತೀಶ್ ಜಾರಕಿಹೊಳಿ, ನೀವು 70ರೂ. ಸೀರೆ ಹಂಚಿದರೆ ನಾವು 200ರೂ. ಸೀರೆ ಹಂಚುತ್ತೇವೆ ಎಂದು ಹೇಳಿದ್ದರು.

ಮಹಾರಾಷ್ಟ್ರಕ್ಕೆ ಜೈ ಎನ್ನುತ್ತೇನೆ ಎಂದು ಹೆಬ್ಬಾಳ್ಕರ್ ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಿರುವ ಅವರು ಯಾವ ಸಂದರ್ಭದಲ್ಲಿ ಈ ಹೇಳಿಕೆ ನೀಡಿದ್ದಾರೋ ಗೊತ್ತಿಲ್ಲ.ಇದು ಅವರ ವೈಯಕ್ತಿಕ ಹೇಳಿಕೆ. ಮರಾಠಿಗರ ಓಲೈಕೆಗಾಗಿ ಈ ರೀತಿ ಹೇಳಿರಲು ಸಾಧ್ಯವಿಲ್ಲ. ಇದಕ್ಕೂ ಪಕ್ಷಕ್ಕೂ ಯಾವುದೇ ಸಂಬಂಧವಿಲ್ಲ. ನನ್ನ ಕ್ಷೇತ್ರದಲ್ಲೂ 40 ಸಾವಿರ ಮರಾಠಿಗರಿದ್ದಾರೆ. ನಾನ್ಯಾವತ್ತೂ ಹಾಗೆ ಹೇಳಿಲ್ಲ ಎಂದರು.

Facebook Comments

Sri Raghav

Admin