ನೋಟ್ ಬ್ಯಾನ್ ಫಲಿತಾಂಶ ನಿರೀಕ್ಷೆಯಂತೆ ಯಶಸ್ವಿ : ಜೇಟ್ಲಿ

ಈ ಸುದ್ದಿಯನ್ನು ಶೇರ್ ಮಾಡಿ

Arun

ನವದೆಹಲಿ, ಆ.31-ನೋಟು ಅಮಾನ್ಯೀಕರಣದ ಫಲಶ್ರುತಿಯು ಊಹಿಸಿದಂತೆ ಯಶಸ್ವಿಯಾಗುತ್ತಿದ್ದು, ಮಧ್ಯಮ ಮತ್ತು ದೀರ್ಘ ಅವಧಿಯಲ್ಲಿ ಇದು ಆರ್ಥಿಕತೆಗೆ ಪ್ರಯೋಜನವಾಗಲಿದ ಎಂದು ಹಣಕಾಸು ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ. ನೋಟು ಅಮಾನ್ಯೀಕರಣದಲ್ಲಿ ರದ್ದು ಮಾಡಲಾದ 500 ರೂ. ಮತ್ತು 1,000 ರೂ.ಗಳ ಕರೆನ್ಸಿಗಳಲ್ಲಿ ಶೇ.98.96ರಷ್ಟು ನೋಟುಗಳು ಬ್ಯಾಂಕಿಂಗ್ ವ್ಯವಸ್ಥೆಗೆ ಹಿಂದಿರುಗಿವೆ ಎಂದು ಆರ್‍ಬಿಐ ತನ್ನ ವಾರ್ಷಿಕ ವರದಿಯಲ್ಲಿ ತಿಳಿಸಿದ ಮರುದಿನವೇ ವಿತ್ತ ಸಚಿವರು ಸಮರ್ಥನೆ ಹೇಳಿಕೆ ನೀಡಿದ್ದಾರೆ.

ಅಮಾನ್ಯೀಕರಣದ ಬಳಿಕ ಬ್ಯಾಂಕುಗಳಲ್ಲಿ ಠೇವಣಿಯಾಗಿರುವ ಹಣದಲ್ಲಿ ಎಲ್ಲವೂ ಕಾನೂನುಬದ್ಧ ಹಣ ಎಂಬುದು ಇದರ ಅರ್ಥವಲ್ಲ. ಆದರೆ ನೋಟು ಅಪನಗದೀಕರಣದ ನಂತರ ಸಾಕಷ್ಟು ಕಾಳಧನ ನಿರ್ಮೂಲನೆಯಾಗಿರುವುದಂತೂ ಸತ್ಯ ಎಂದು ಜೇಟ್ಲಿ ಹೇಳಿದರು. ನೋಟು ಅಮಾನ್ಯೀಕರಣ ಮತ್ತು ಜಿಎಸ್‍ಟಿ (ಸರಕುಗಳು ಮತ್ತು ಸೇವೆಗಳ ತೆರಿಗೆ) ಜಾರಿಯಿಂದಾಗಿ ಸಾಕಷ್ಟು ಮಂದಿ ತೆರಿಗೆ ಜಾಲಕ್ಕೆ ಒಳಪಟ್ಟಿರುವುದರಿಂದ ನೇರ ತೆರಿಗೆ ಆದಾಯದಲ್ಲಿ ಗಮನಾರ್ಹ ಏರಿಕೆ ಕಂಡುಬಂದಿದೆ ಎಂದು ಅವರು ಪುನರುಚ್ಚರಿಸಿದರು.

Facebook Comments

Sri Raghav

Admin