ನೋಟ್ ಬ್ಯಾನ್ : ಬಹುಮುಖ್ಯ ವಿವರಗಳೇ ಇಲ್ಲದ ಆರ್‍ಬಿಐ ವರದಿ, ಸ್ವೀಕಾರ ಮುಂದೂಡಿಕೆ

ಈ ಸುದ್ದಿಯನ್ನು ಶೇರ್ ಮಾಡಿ

note-ban

ಮುಂಬೈ/ನವದೆಹಲಿ, ಆ.31-ನೋಟು ಅಮಾನ್ಯ ಕುರಿತು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‍ಬಿಐ) ಸಲ್ಲಿಸಿರುವ ವರದಿಯಲ್ಲಿ ರದ್ದಾದ ನೋಟುಗಳ ನಿಖರ ಪ್ರಮಾಣ ಸೇರಿದಂತೆ ಬಹು ಮುಖ್ಯ ವಿವರಗಳೇ ಇಲ್ಲವಂತೆ. ಈ ಬಗ್ಗೆ ಸ್ಪಷ್ಟವಾಗಿ ತಿಳಿಸಿರುವ ಹಣಕಾಸು ಸಂಸದೀಯ ಸ್ಥಾಯಿ ಸಮಿತಿ ಕರಡು ವರದಿಯನ್ನು ಮರುರೂಪಿಸುವಂತೆ ಆರ್‍ಬಿಐಗೆ ಸೂಚನೆ ನೀಡಿದೆ. ಈ ಹಿನ್ನೆಲೆಯಲ್ಲಿ ವರದಿ ಸ್ವೀಕಾರವನ್ನು ಸಮಿತಿ ಮುಂದೂಡಿತು ಎಂದು ಉನ್ನತ ಮೂಲಗಳು ತಿಳಿಸಿವೆ
ನೋಟು ಅಮಾನ್ಯೀಕರಣದಲ್ಲಿ ರದ್ದು ಮಾಡಲಾದ 500 ರೂ. ಮತ್ತು 1,000 ರೂ.ಗಳ ಕರೆನ್ಸಿಗಳಲ್ಲಿ ಶೇ.98.96ರಷ್ಟು ನೋಟುಗಳು ಬ್ಯಾಂಕಿಂಗ್ ವ್ಯವಸ್ಥೆಗೆ ಹಿಂದಿರುಗಿವೆ ಎಂದು ಆರ್‍ಬಿಐ ತನ್ನ ವಾರ್ಷಿಕ ವರದಿಯಲ್ಲಿ ತಿಳಿಸಿತ್ತು.

ಈ ವರದಿಯಲ್ಲಿ ಬಹು ಮುಖ್ಯವಾದ ಮಾಹಿತಿಯೇ ಇಲ್ಲ. ಇದನ್ನು ಮತ್ತೊಮ್ಮೆ ಸಿದ್ಧಗೊಳಿಸುವ ಅಗತ್ಯವಿದೆ ಎಂದು ಸಮಿತಿಯ ಸದಸ್ಯರಾಗಿರುವ ಸಂಸದರು ಪಕ್ಷಬೇಧ ಮರೆತು ಹೇಳಿದ್ದರೆ, ಕೆಲವರು ವರದಿಯಲ್ಲಿ ಗಮನಾರ್ಹ ಅಂಶಗಳಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಈ ಹಿನ್ನೆಲೆಯಲ್ಲಿ ವರದಿ ಸ್ವೀಕಾರವನ್ನು ಸಮಿತಿ ಮುಂದೂಡಿತು ಎಂದು ತಿಳಿದುಬಂದಿದೆ.  ಕಾಂಗ್ರೆಸ್ ಹಿರಿಯ ಸಂಸದ ಎಂ.ವೀರಪ್ಪ ಮೊಯ್ಲಿ ನೇತೃತ್ವದ ಸಮಿತಿಯ ಅಧಿಕಾರಾವಧಿಯು ಇಂದು (ಆ.31) ಮುಗಿಯಲಿದ್ದು, ಸಮಿತಿ ಪುನರಚನೆಯಾದ ಬಳಿಕವೇ ನೋಟು ಅಮಾನ್ಯ ಕುರಿತ ಆರ್‍ಬಿಐ ವರದಿ ಸ್ವೀಕೃತವಾಗಬಹುದು ಮೂಲಗಳು ತಿಳಿಸಿವೆ.
ನೋಟು ರದ್ದತಿ ಹಿನ್ನೆಲೆಯಲ್ಲಿ ಡಿಜಿಟಲ್ ವ್ಯವಹಾರವನ್ನು ಜನರ ಮೇಲೆ ಹೇರಬಾರದು ಎಂಬ ಅಭಿಪ್ರಾಯವನ್ನು ಸಮಿತಿಯ ಸದಸ್ಯರೂ ಆಗಿರುವ ಮಾಜಿ ಪ್ರಧಾನಮಂತ್ರಿ ಡಾ.ಮನಮೋಹನ್ ಸಿಂಗ್ ವ್ಯಕ್ತಪಡಿಸಿದ್ದಾರೆ.

ಆರ್‍ಬಿಐನ ಎಲ್ಲ ವಿವರಗಳನ್ನು ಮತ್ತು ಸಮಿತಿ ಸದಸ್ಯರು ಕೇಳಿದ ಪ್ರಶ್ನೆಗಳಿಗೆ ಉತ್ತರಗಳನ್ನು ಒದಗಿಲ್ಲದ ಕಾರಣ ವರದಿ ಅಪೂರ್ಣವಾಗಿದೆ ಎಂದು ಬಿಜೆಪಿ ಸದಸ್ಯ ನಿಶಿಕಾಂತ್ ದುಬೆ ತಿಳಿಸಿದ್ದಾರೆ ಎಂದು ಮೂಲಗಳು ಹೇಳಿವೆ.

Facebook Comments

Sri Raghav

Admin