ಮಹಾಮಳೆಗೆ ಮುಂಬೈನಲ್ಲಿ ಕಟ್ಟಡ ಕುಸಿದು 10 ಜನರ ಸಾವು, 15 ಮಂದಿಗೆ ಗಾಯ

ಈ ಸುದ್ದಿಯನ್ನು ಶೇರ್ ಮಾಡಿ

Mumbai--01

ಮುಂಬೈ, ಆ.31-ವಾಣಿಜ್ಯ ನಗರ ಮುಂಬೈನ ಭೆಂಡಿ ಬಜಾರ್ ಪ್ರದೇಶದಲ್ಲಿ ಇಂದು ಬೆಳಗ್ಗೆ ಐದು ಅಂತಸ್ತಿನ ಕಟ್ಟಡ ಕುಸಿದು 10 ಮಂದಿ ಮೃತಪಟ್ಟಿದ್ದಾರೆ. ಈ ದುರಂತದಲ್ಲಿ 15 ಮಂದಿ ತೀವ್ರ ಗಾಯಗೊಂಡಿದ್ದು ಕೆಲವರ ಸ್ಥಿತಿ ಚಿಂತಾಜನಕವಾಗಿದೆ. ಎರಡು ದಿನಗಳಲ್ಲಿ ಮುಂಬೈನಲ್ಲಿ ಕುಸಿದು ಬಿದ್ದ ಎರಡನೇ ಕಟ್ಟಡ ಇದಾಗಿದೆ.  ಮುಂಬೈನಲ್ಲಿ ಸುರಿದ ಭಾರೀ ಮಳೆಯಿಂದ ಶಿಥಿಲಗೊಂಡ ಕಟ್ಟಡ ಉರುಳಿ ಬಿದ್ದು ಈ ದುರ್ಘಟನೆ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಕಟ್ಟಡವು 12 ಕೊಠಡಿಗಳು ಮತ್ತು ಆರು ಗೋದಾಮುಗಳನ್ನು ಹೊಂದಿತ್ತು. ಉರುಳಿಬಿದ್ದ ಕಟ್ಟಡದ ಕೆಳಗೆ ಇನ್ನು ಕೆಲವರು ಸಿಲುಕಿರುವ ಸಾಧ್ಯತೆ ಇದ್ದು, ರಕ್ಷಣಾ ಕಾರ್ಯಾಚರಣೆ ಸಮರೋಪಾದಿಯಲ್ಲಿ ಸಾಗಿದೆ.

Mumabi--03

ದಕ್ಷಿಣ ಮುಂಬೈನ ಭೆಂಡಿ ಬಜಾರ್‍ನಲ್ಲಿ ಕಟ್ಟಡ ಕುಸಿದ ಬಗ್ಗೆ ವಿಪತ್ತು ನಿರ್ವಹಣಾ ಘಟಕಕ್ಕೆ ಬೆಳಗ್ಗೆ 8.40ರಲ್ಲಿ ಫೋನ್ ಕರೆ ಬಂದ ಹಿನ್ನೆಲೆಯಲ್ಲಿ ಅಗ್ನಿಶಾಮಕ ದಳದೊಂದಿಗೆ ನಾವು ತಕ್ಷಣ ಸ್ಥಳಕ್ಕೆ ಧಾವಿಸಿದೆವು. ಉರುಳಿಬಿದ್ದ ಕಟ್ಟಡದ ಅವಶೇಷಗಳಡಿ ಹಲವರು ಸಿಕ್ಕಿ ಬಿದ್ದಿದ್ದರು. 10 ಮಂದಿ ಮೃತಪಟ್ಟಿದ್ದಾರೆ ಎಂದು ಮುನ್ಸಿಪಲ್ ಕಾರ್ಪೊರೇಷನ್ ಆಫ್ ಗ್ರೇಟರ್ ಮುಂಬೈನ(ಎಂಸಿಜಿಎಂ) ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.  ಗಾಯಗೊಂಡ 15 ಮಂದಿಯನ್ನು ಹತ್ತಿರದ ಜೆ.ಜೆ.ಆಸ್ಪತ್ರೆಗೆ ದಾಖಲಿಸಲಾಗಿದ್ದು, ಕೆಲವರ ಸ್ಥಿತಿ ಶೋಚನೀಯವಾಗಿದೆ . ಸ್ಥಳೀಯ ಸಹಕಾರದೊಂದಿಗೆ 50 ಮಂದಿ ಸಿಬ್ಬಂದಿ ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆ ಮುಂದುವರಿಸಿದ್ದಾರೆ. ಉರುಳಿಬಿದ್ದ ಕಟ್ಟಡವನ್ನು ತೆರವುಗೊಳಿಸುವ ಕಾರ್ಯ ನಡೆಯುತ್ತಿದೆ. ಘಟನೆ ಬಗ್ಗೆ ಮಹಾರಾಷ್ಟ್ರ ಸರ್ಕಾರ ತನಿಖೆಗೆ ಆದೇಶಿಸಿದೆ ಎಂದು ಸಚಿವ ಸುಭಾಷ್ ದೇಸಾಯಿ ತಿಳಿಸಿದ್ದಾರೆ.

Mumbai--04

ಮತ್ತೊಂದು ದುರಂತ : ಇಬ್ಬರ ಸಾವು

ಉತ್ತರಪ್ರದೇಶದ ಪ್ರತಾಪ್‍ಗಢದ ಹೈನ್ಸಿ ಗ್ರಾಮದಲ್ಲಿ ಮನೆಯೊಂದು ಕುಸಿದು ತಂದೆ ಮತ್ತು ಮಗ ಮೃತಪಟ್ಟಿದ್ದಾರೆ. ಅರ್ಜುನ್ ಸರೋಜ್ (55) ಮತ್ತು ಮಗ ಶುಭಂ(16) ಎಂಬುವರು ಮನೆಯಲ್ಲಿ ಮಲಗಿದ್ದಾಗ ಈ ದುರಂತ ಸಂಭವಿಸಿದೆ.

Mumbai--02

Facebook Comments

Sri Raghav

Admin