ವಿಮಾನ ನಿಲ್ದಾಣದಲ್ಲಿ ಬಿಜೆಪಿ ಸಂಸದನ ಕಿರಿಕ್

ಈ ಸುದ್ದಿಯನ್ನು ಶೇರ್ ಮಾಡಿ

BJP-MLA-01

ಭೋಪಾಲ್, ಆ.31-ಏರ್ ಇಂಡಿಯಾ ಸಿಬ್ಬಂದಿ ಮೇಲೆ ಶಿವಸೇನೆ ಸಂಸದ ರವೀಂದ್ರ ಗಾಯಕ್ವಾಡ್ ಹಲ್ಲೆ ನಡೆಸಿ ಉದ್ಧಟತನ ತೋರಿದ್ದ ಘಟನೆಯನ್ನು ನೆನಪಿಸುವ ಮತ್ತೊಂದು ಪ್ರಸಂಗ ನಡೆದಿದೆ. ಬಿಜೆಪಿ ಸಂಸದರೊಬ್ಬರು ಏರ್ ಇಂಡಿಯಾ ಸಿಬ್ಬಂದಿ ಜೊತೆ ಗಲಾಟೆ ಮಾಡಿ ದುರ್ವತನೆ ಪ್ರದರ್ಶಿಸಿದ ಘಟನೆ ಮಧ್ಯಪ್ರದೇಶದ ಭೂಪಾಲ್‍ನ ರಾಜಾಭೋಜಾ ವಿಮಾನನಿಲ್ದಾಣದಲ್ಲಿ ನಡೆದಿದೆ.  ಭಿಂದ್‍ನ ಸಂಸದ ಭಗೀರಥ್ ಪ್ರಸಾದ್ ಏರ್ ಇಂಡಿಯಾ ವಿಮಾನದಲ್ಲಿ ಬ್ಯುಸಿನೆಸ್ ಕ್ಲಾಸ್ ಟಿಕೆಟ್ ಹೊಂದಿದ್ದರು. ಆದರೆ ಕೆಲವು ಕಾರಣಗಳಿಂದ ಅವರಿಗೆ ಎಕಾನಮಿ ಕ್ಲಾಸ್‍ನಲ್ಲಿ ಆಸನ ಮಂಜೂರು ಮಾಡಲಾಗಿತ್ತು.

ಇದಕ್ಕಾಗಿ ಕ್ಷಮೆ ಕೋರಿದರೂ ಸಿಬ್ಬಂದಿ ಮೇಲೆ ಸಂಸದ ಎಗರಾಡಿ ಗಲಾಟೆ ಮಾಡಿದರು. ಕೂಡಲೇ ಏರ್‍ಇಂಡಿಯಾ ಹಿರಿಯ ಸಿಬ್ಬಂದಿ ಪ್ರಸಾದ್ ಅವರ ಬೇಡಿಕೆ ಈಡೇರಿಸಿದರು. ಈ ಘಟನೆಯಿಂದಾಗಿ ವಿಮಾನ 20 ನಿಮಿಷ ತಡವಾಗಿ ಮೇಲೇರಿತು. ತಾವು ಯಾವುದೇ ಗಲಾಟೆ ಮಾಡಿಲ್ಲ. ಸಾಮಾನ್ಯ ಪ್ರಯಾಣಿಕನಾಗಿ ನಾನು ಇದನ್ನು ಪ್ರಶ್ನಿಸಿದೆ ಎಂದು ಅವರು ತಿಳಿಸಿದ್ಧಾರೆ. ಇದೇ ಕಾರಣಕ್ಕೆ ಐದು ತಿಂಗಳ ಹಿಂದೆ ಶಿವಸೇನೆ ಮುಖಂಡ ಗಾಯಕ್ವಾಡ್ ಏರ್‍ಇಂಡಿಯಾ ಮ್ಯಾನೇಜರ್ ಮೇಲೆ ಹಲ್ಲೆ ನಡೆಸಿ ಭಾರೀ ವಿವಾದಕ್ಕೆ ಒಳಗಾಗಿದ್ದರು.

Facebook Comments

Sri Raghav

Admin