ಶೂ ಹಾಕಲು ಬಂದ ಕಾರ್ಯಕರ್ತನಿಗೆ ಗದರಿದ ವೇಣುಗೋಪಾಲ್

ಈ ಸುದ್ದಿಯನ್ನು ಶೇರ್ ಮಾಡಿ

Venugopal--01

ಬೆಂಗಳೂರು, ಆ.31- ಕಾಲಿಗೆ ಶೂ ಹಾಕಲು ಹೋದ ಕಾರ್ಯಕರ್ತನಿಗೆ ಕಾಂಗ್ರೆಸ್ ಪಕ್ಷದ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಕೆಪಿಸಿಸಿ ಕಚೇರಿ ಮುಂದೆ ಗದರಿದ ಘಟನೆ ನಡೆದಿದೆ. ಕೆಪಿಸಿಸಿ ಕಚೇರಿಯ ಮೆಟ್ಟಿಲು ಹತ್ತುವಾಗ ವೇಣುಗೋಪಾಲ್ ಅವರ ಶೂ ಕಾಲಿನಿಂದ ಕಳಚಿದೆ. ಈ ವೇಳೆ ಕಳಚಿದ ಶೂ ಹಾಕಲು ಕಾರ್ಯಕರ್ತನೊಬ್ಬ ಮುಂದಾಗಿದ್ದಾನೆ. ಕೂಡಲೇ ಕಾರ್ಯಕರ್ತನಿಗೆ ಕೈ ಸನ್ನೆ ಮೂಲಕ ಗದರಿದ ವೇಣುಗೋಪಾಲ್ ಅವರು ಶೂ ಮುಟ್ಟದಂತೆ ತಾಕೀತು ಮಾಡಿದ್ದಲ್ಲದೆ ತಾವೇ ಶೂ ಸರಿಮಾಡಿಕೊಂಡು ಮುಂದೆ ನಡೆದಿದ್ದಾರೆ. ಶೂ ಹಾಕಲೆಂದು ಬಂದ ಕಾರ್ಯಕರ್ತನನ್ನು ದುರುಗುಟ್ಟಿಕೊಂಡು ನೋಡಿ ಗದರಿಸಿ ಕಳುಹಿಸಿದ್ದಾರೆ.

Facebook Comments

Sri Raghav

Admin