ಹಾರ್ವೆ ಚಂಡಮಾರುತ : ಮೃತರ ಸಂಖ್ಯೆ 40ಕ್ಕೆರಿಕೆ, ರಾಸಾಯನಿಕ ಸ್ಫೋಟದ ಆತಂಕ

ಈ ಸುದ್ದಿಯನ್ನು ಶೇರ್ ಮಾಡಿ

Harvey-Hurricane

ಹ್ಯೂಸ್ಟನ್, ಆ.31-ಅಮೆರಿಕದ ಟೆಕ್ಶಾಸ್‍ನಲ್ಲಿ ಹಾರ್ವೆ ಚಂಡಮಾರುತದ ಅಬ್ಬರ ಮುಂದುವರಿದಿದ್ದು, ಭಾರೀ ಮಳೆ ಮತ್ತು ಪ್ರವಾಹಕ್ಕೆ ಸಿಲುಕಿ ಮೃತಪಟ್ಟವರ ಸಂಖ್ಯೆ 40ಕ್ಕೇರಿದೆ. ಪ್ರಕೃತಿ ವಿಕೋಪದಿಂದ ಹ್ಯೂಸ್ಟನ್‍ನಲ್ಲಿರುವ ರಾಸಾಯನಿಕ ಸ್ಫೋಟ ಸಂಭವಿಸುವ ಆತಂಕವೂ ಇದೆ.  ಇನ್ನೊಂದೆಡೆ ಪರಿಸ್ಥಿತಿ ದುರ್ಲಾಭ ಪಡೆದು ಲೂಟಿ ಮತ್ತು ಅವಕಾಶವಾದಿ ಅಪರಾಧ ಕೃತ್ಯಗಳು ನಡೆಯುವುದನ್ನು ತಪ್ಪಿಸಲು ರಾತ್ರಿ ಕಫ್ರ್ಯೂ ಜಾರಿಗೊಳಿಸಲಾಗಿದೆ. ಕೆಲವು ವರ್ಷಗಳ ಹಿಂದೆ ಅಮೆರಿಕ ಮೇಲೆ ಅಪ್ಪಳಿಸಿದ್ದ ಕತ್ರಿನಾ ಚಂಡಮಾರುತದ ವೇಳೆ ಕೆಲವೆಡೆ ಲೂಟಿ, ದರೋಡೆ ಮತ್ತು ಅತ್ಯಾಚಾರ ಪ್ರಕರಣಗಳು ನಡೆದಿದ್ದವು. ಚಂಡಮಾರುತದಿಂದ ಅಮೆರಿಕದ ನಾಲ್ಕನೇ ಅತಿದೊಡ್ಡ ನಗರವಾದ ಹ್ಯೂಸ್ಟನ್‍ನಲ್ಲಿ ಜನವಸತಿ ಪ್ರದೇಶಗಳು ಮತ್ತು ಹೆದ್ದಾರಿಗಳು ನೀರಿನಲ್ಲಿ ಮುಳುಗಡೆಯಾಗಿದ್ದು, ಲಕ್ಷಾಂತರ ಮಂದಿ ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದಾರೆ.

Harvey-Hurricane-5

ಟೆಕ್ಸಾಸ್‍ನಲ್ಲಿ ಪ್ರವಾಹದಿಂದ ಪಾರಾಗಲೂ ವ್ಯಾನಿನಲ್ಲಿ ತೆರಳುತ್ತಿದ್ದ ನಾಲ್ವರು ಮಕ್ಕಳೂ ಸೇರಿದಂತೆ ಒಂದೇ ಕುಟುಂಬದ ಆರು ಮಂದಿ ಜಲಸಮಾಧಿಯಾಗಿದ್ದರು. ಅವರ ಶವಗಳು ಪತ್ತೆಯಾಗಿವೆ.  ಕಳೆದ ಐದು ದಿನಗಳಿಂದ ಚಂಡಮಾರುತದ ಪ್ರಭಾವದಿಂದ ಟೆಕ್ಸಾಸ್‍ನಲ್ಲಿ ಭೀಕರ ಮಳೆಯಿಂದ ಜಲಪ್ರಳಯ ಸೃಷ್ಟಿಯಾಗಿದ್ದು, ರಸ್ತೆಗಳಲ್ಲಿ ಎದೆಮಟ್ಟದ ನೀರು ನಿಂತಿದೆ. ರಾಜ್ಯದಾದ್ಯಂತ ಸುಮಾರು 1.5 ಕೋಟಿ ಮಂದಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ನೀರಿನ ಮಟ್ಟ ಏರುತ್ತಿರುವ ಕಾರಣ ಅನೇಕರು ಮನೆಗಳ ಮೇಲ್ಚಾವಣಿ ಏರಿ ಕುಳಿತಿದ್ದಾರೆ. ತಾತ್ಕಾಲಿಕ ಬಿಡಾರಗಳಲ್ಲಿ ಆಶ್ರಯ ಪಡೆದಿರುವ ಜನರು ರಕ್ಷಣಾ ಹೆಲಿಕಾಪ್ಟರ್ ಅಥವಾ ದೋಣಿಗಳನ್ನು ಎದುರು ನೋಡುತ್ತಿದ್ದಾರೆ. ಹಾರ್ವೆಯಿಂದಾಗಿ ವಾಯುವ್ಯ ಟೆಕ್ಸಾಸ್ ನದಿಯಂತಾಗಿದೆ.

Harvey-Hurricane-4

ಈ ಪ್ರಾಂತ್ಯದಲ್ಲಿ ಮುಂದಿನ ವಾರದವರೆಗೂ ಹಾರ್ವೆ ಅಬ್ಬರ ಮುಂದುವರಿಯುವ ಸಾಧ್ಯತೆ ಇದ್ದು, ಪ್ರವಾಹದ ಮಟ್ಟ ಮತ್ತಷ್ಟು ಏರಿಕೆಯಾಗುವ ಭೀತಿ ಇದೆ. ಅನಾಹುತಗಳೊಂದಿಗೆ ಸಾವು-ನೋವಿನ ಸಂಖ್ಯೆಯೂ ಹೆಚ್ಚಾಗುವ ಆತಂಕವೂ ಎದುರಾಗಿದೆ. ಪ್ರವಾಹಪೀಡಿತ ಪ್ರದೇಶಗಳಲ್ಲಿ ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಗಳು ಮುಂದುವರಿದಿವೆ.

Harvey-Hurricane-2

Facebook Comments

Sri Raghav

Admin