ಹೇಮಾವತಿ ಹೋರಾಟದಲ್ಲಿ ಆತ್ಮಹತ್ಯೆ ಮಾಡಿಕೊಂಡ ರೈತನ ಕುಟುಂಬಕ್ಕೆ 5 ಲಕ್ಷ ಪರಿಹಾರ

ಈ ಸುದ್ದಿಯನ್ನು ಶೇರ್ ಮಾಡಿ

Chaluvaraju-Former-Hemavath

ತುಮಕೂರು. ಆ. 31 : ಹೇಮಾವತಿ ನೀರಿಗಾಗಿ ರೈತರು ನಡೆಸುತ್ತಿದ್ದ ಹೋರಾಟ ಉಗ್ರ ಸ್ವರೂಪ ಪಡೆದುಕೊಂಡಿದ್ದು, ಈ ವೇಳೆ ಗುಬ್ಬಿ ತಾಲ್ಲೂಕಿನ ಸೋಮ್ಲಾಪುರದ ಚೆಲುವರಾಜು(35) ಎಂಬ ರೈತ ನಾಲೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡರು. ಈ ವಿಷಯ ತಿಳಿದ ತಕ್ಷಣ ಸ್ಥಳಕ್ಕೆ ಆಗಮಿಸಿದ ಜಿಲ್ಲಾ ಫೋಲಿಸ್ ವರಿಷ್ಠದಿಕಾರಿ ದಿವ್ಯ ಗೋಪಿನಾಥ ಅವರಿಂದ ಮಾಹಿತಿ ಪಡೆದ ಮೋಹನ್ ರಾಜ್ ನಂತರ ಜಿಲ್ಲಾ ಉಸ್ತುವಾರಿ ಸಚಿವರಾದ ಟಿ.ಬಿ.ಜಯಚಂದ್ರ ಹಾಗೂ ನೀರಾವರಿ ಸಚಿವ ಎಂ. ಬಿ.ಪಾಟೀಲ್ ಅವರ ಗಮನಕ್ಕೆ ತಂದು ಚರ್ಚಿಸಿದರು.

ನಂತರ ಮೃತಪಟ್ಟ ರೈತನ ಪತ್ನಿ ಹಾಗು ಕುಟುಂಬದವರನ್ನು ಬೇಟಿ ಮಾಡಿ ಅವರಿಂದ ಮನವಿ ಪಡೆದರು ನಂತರ ಜಿಲ್ಲಾಡಳಿತದ ವತಿಯಿಂದ ಐದು ಲಕ್ಷ ಹಣವನ್ನು ಪರಿಹಾರ ನೀಡುವುದಾಗಿ ತಿಳಿಸಿದರು ರೈತರು ಯಾವುದೇ ಕಾರಣಕ್ಕೂ ಕಾನೂನನ್ನ ಕೈಯಿಗೆ ತೆಗೆದು ಕೋಳ್ಳಬಾರದು ಜಿಲ್ಲಾಡಳಿತದೂಂದಿಗೆ ರೈತರು ಸಹಕರಿಸಿ ನಮಗೂ ಎಲ್ಲಾ ಕೆರೆಗಳಿಗೆ ನೀರು ಹರಿಸಬೇಕೆಂದು ಅದರೆ ಮೊದಲು ಕೊನೆಯ ಭಾಗಕ್ಕೆ ಮೊದಲು ನೀರು ಹರಿಸಬೇಕು, ನಂತರ ಹಂತ ಹಂತ ವಾಗಿ ಎಲ್ಲಾ ಕೆರೆ ಗಳಿಗೆ ನೀರು ಹರಿಸುತ್ತೇವೆ ಎಂದು ಇದೇ ಸಂದರ್ಭದಲ್ಲಿ ಅಲ್ಲಿನ ರೈತರಲ್ಲಿ ಮನವಿ ಮಾಡಿದರು.

ಜಿಲ್ಲಾಡಳಿತ ವಿರುದ್ಧ ರೈತರ ಆಕ್ರೋಶ :

ಹಲವು ವರ್ಷಗಳಿಂದ ಬರಗಾಲಕ್ಕೆ ತುತ್ತಾಗಿ ಕುಡಿಯಲು ನೀರು ಇಲ್ಲ ಧನ ಕರುಗಳು ಮೇವೂ ಇಲ್ಲದೆ ಪರಿತಪಿಸುತ್ತಿವೆ ಇಂತಹ ಸಂದರ್ಭದಲ್ಲಿ ಈಗ ನೀರು ಬರುತ್ತಿದೆ ನಮ್ಮ ಕೆರೆಗಳಿಗೆ ನೀರು ಹರಿಸಲು ಅನುವೂ ಮಾಡಿಕೊಡಿ ಇಲ್ಲದೆ ಇದ್ದರೆ ಪರಿಣಾಮ ಸರಿ ಇರುವುದಿಲ್ಲ ಎಂದು ರೈತರು ಜಿಲ್ಲಾಡಳಿತ ವಿರುದ್ದ ತೀವ್ರ ಆಕ್ರೋಶ ವ್ಯಕ್ತ ಪಡಿಸಿದರು.  ಗುಬ್ಬಿ ಕ್ಷೇತ್ರದ ಶಾಸಕ ಎಸ್ ಆರ್ ಶ್ರೀನಿವಾಸ್ ರೈತ ಮುಖಂಡರು ಉಪ ವಿಭಾಗದಿಕಾರಿ ತಪ್ಸಮಾ ಜಹೇರಾ ಎಸ್ಪಿ ದಿವ್ಯ ಗೋಪಿನಾಥ್ ನೀರಾವರಿ ಇಲಾಖೆಯ ಮುಖ್ಯ ಇಂಜಿನಿಯರ್ ಶಿವಕುಮಾರ್ ತಹಸೀಲ್ದಾರ್ ಹರೀಶ್ ಸೇರಿದಂತೆ ಇತರೆ ಅಧಿಕಾರಿಗಳು ಇದ್ದರು ಸುಮಾರು ಒಂದು ಸಾವಿರಕ್ಕೂ ಹೆಚ್ಚುಮಂದಿ ಫೋಲಿಸರುನ್ನು ನಿಯೋಜಿಸಲಾಗಿತ್ತು ಇಂದು ಸಂಜೆಯಾದರು ಮೃತನ ಶವ ಇನ್ನು ಪತ್ತೆಯಾಗಿಲ್ಲ.

Facebook Comments

Sri Raghav

Admin