ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (01-09-2017)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ : ಯೌವನ, ರೂಪ, ಜೀವಿತ, ಧನಸಂಗ್ರಹ, ಆರೋಗ್ಯ, ಪ್ರಿಯಜನಸಹವಾಸ-ಇವೆಲ್ಲವೂ ಅನಿತ್ಯ. ಪಂಡಿತನು ಇವುಗಳಿಗಾಗಿ ಅತ್ಯಾಸೆ ಪಡತಕ್ಕದ್ದಲ್ಲ.- ಮಹಾಭಾರತ

Rashi

ಪಂಚಾಂಗ : ಶುಕ್ರವಾರ, 01.09.2017

ಸೂರ್ಯ ಉದಯ ಬೆ.6.09 / ಸೂರ್ಯ ಅಸ್ತ ಸಂ.6.31
ಚಂದ್ರ ಅಸ್ತ ರಾ.2.34 / ಚಂದ್ರ ಉದಯ ಮ.2.48
ಹೇವಿಳಂಬಿ ಸಂವತ್ಸರ / ದಕ್ಷಿಣಾಯಣ / ವರ್ಷಋತು / ಭಾದ್ರಪದ ಮಾಸ
ಶುಕ್ಲ ಪಕ್ಷ / ತಿಥಿ : ದಶಮಿ (ಬೆ.7.37) / ನಕ್ಷತ್ರ: ಪೂರ್ವಾಷಢ (ದಿನಪೂರ್ತಿ)
ಯೋಗ: ಆಯುಷ್ಮಾನ್ (ರಾ.3.03) / ಕರಣ: ಗರಜೆ-ವಣಿಜ್ (ಬೆ.7.37-ರಾ.8.40)
ಮಳೆ ನಕ್ಷತ್ರ: ಮಖ / ಮಾಸ: ಸಿಂಹ / ತೇದಿ: 16

ರಾಶಿ ಭವಿಷ್ಯ :

ಮೇಷ : ವಿವಿಧೆಡೆಗಳಿಂದ ಹಣ ಬಂದರೂ ಉಳಿಯ ಲಾರದು, ದೂರ ಸಂಚಾರದಲ್ಲಿ ಕಾರ್ಯಸಿದ್ಧಿ
ವೃಷಭ : ಶ್ರೀ ಗುರುದೇವತಾ ದರ್ಶನದಿಂದ ಮನಸ್ಸಿಗೆ ಶಾಂತಿ, ಸಮಾಧಾನ ಸಿಗುತ್ತದೆ
ಮಿಥುನ: ಸಮಸ್ಯೆಗಳನ್ನು ಸಮರ್ಥವಾಗಿ ಎದುರಿ ಸುವ ಆತ್ಮಸ್ಥೈರ್ಯ ನಿಮಗಿರುತ್ತದೆ
ಕಟಕ : ಸರ್ಕಾರಿ ವೃತ್ತಿಯವರಿಗೆ ಮುಂಬಡ್ತಿಗೆ ಅವಕಾಶಗಳಿರುತ್ತವೆ
ಸಿಂಹ: ಶೃಂಗಾರೋಪಕರಣ ಗಳ ಮಾರಾಟಗಾರರಿಗೆ ಹೆಚ್ಚಿನ ಲಾಭ ದೊರೆಯಲಿದೆ
ಕನ್ಯಾ: ಕಿರುತೆರೆ ಸಂಬಂಧಿಕರಿಗೆ ಗೌರವಾದರ ಲಭಿಸುವುದು

ತುಲಾ: ವಿವಿಧ ರೀತಿಯಲ್ಲಿ ಧನ ಸಂಗ್ರಹವಿದ್ದರೂ ಲೆಕ್ಕಾಚಾರ ತಪ್ಪಾಗಲಿದೆ
ವೃಶ್ಚಿಕ : ಹಣ್ಣು-ತರಕಾರಿ ವ್ಯಾಪಾರಸ್ಥರಿಗೆ ಉತ್ತಮ ಆದಾಯ
ಧನುಸ್ಸು: ದೂರ ಸಂಚಾರದಲ್ಲಿ ಅಘಾತ ಭೀತಿ
ಮಕರ: ಪ್ರಯತ್ನ ಬಲವೇ ನಿಮ್ಮನ್ನು ಮುನ್ನಡೆಗೆ, ಅಭಿವೃದ್ಧಿಗೆ ಸಾಗಿಸಲಿದೆ, ಉತ್ತಮ ದಿನ
ಕುಂಭ: ಗೃಹದಲ್ಲಿ ಕಳ್ಳ-ಕಾಕರ ಬಗ್ಗೆ ಜಾಗ್ರತೆ ಇರಲಿ
ಮೀನ: ವಿದೇಶ ಪ್ರವಾಸದಿಂದ ಸಂಭ್ರಮ


+ ಡಾ. ವಿಶ್ವಪತಿ ಶಾಸ್ತ್ರಿ
ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)


< ಪ್ರತಿದಿನ ನಿಮ್ಮ ಮೊಬೈಲ್ ನಲ್ಲಿ ದಿನಭವಿಷ್ಯ ನೋಡಲು Eesanje News 24/7  ನ್ಯೂಸ್ ಆಪ್ ಡೌನ್ಲೋಡ್ ಮಾಡಿಕೊಳ್ಳಿ >

 Click Here to Download  :  Android / iOS  

Facebook Comments

Sri Raghav

Admin