ಇಂದು ಸಂಜೆ ನೂತನ ಸಚಿವರ ಪ್ರಮಾಣವಚನ, ಯಾರಿಗೆ ಯಾವ ಖಾತೆ..?

ಈ ಸುದ್ದಿಯನ್ನು ಶೇರ್ ಮಾಡಿ

Minister-Cabinet

ಬೆಂಗಳೂರು, ಸೆ.1- ಎಚ್.ಎಂ.ರೇವಣ್ಣ, ಆರ್.ಬಿ.ತಿಮ್ಮಾಪುರ್, ಗೀತಾ ಮಹದೇವಪ್ರಸಾದ್ ಅವರ ಸೇರ್ಪಡೆಯೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸಂಪುಟ ಭರ್ತಿಯಾಗಿದೆ. ರಾಜಭವನದಲ್ಲಿ ಇಂದು ನೂತನ ಸಚಿವರಾಗಿ ಎಚ್.ಎಂ.ರೇವಣ್ಣ, ಆರ್.ಬಿ.ತಿಮ್ಮಾಪುರ್, ಗೀತಾ ಮಹದೇವಪ್ರಸಾದ್ ಅವರು ರಾಜ್ಯಪಾಲ ವಿ.ಆರ್.ವಾಲಾ ಅವರಿಂದ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ರೇವಣ್ಣ ಅವರಿಗೆ ಅರಣ್ಯ ಖಾತೆ, ತಿಮ್ಮಾಪುರ್‍ಗೆ ಅಬಕಾರಿ ಸಂಪುಟ ದರ್ಜೆ ಖಾತೆ ದೊರೆತರೆ ಹಾಗೂ ಗೀತಾ ಮಹದೇವಪ್ರಸಾದ್ ಅವರಿಗೆ ಅವರ ಪತಿ ನಿರ್ವಹಿಸುತ್ತಿದ್ದ ಸಹಕಾರ ಖಾತೆಯನ್ನೇ ನೀಡುವ ಸಾಧ್ಯತೆ ಇದೆ.

ಆದರೆ, ಅವರಿಗೆ ರಾಜ್ಯ ಖಾತೆ ಸಚಿವರಾಗಿ ನೇಮಿಸಲು ನಿರ್ಧರಿಸಲಾಗಿದೆ ಎಂದು ತಿಳಿದು ಬಂದಿದೆ. ಇದೇ ಸಂದರ್ಭದಲ್ಲಿ ರಾಜ್ಯ ಖಾತೆ ಸಚಿವರಾದ ಪ್ರಿಯಾಂಕ್‍ಖರ್ಗೆ, ಪ್ರಮೋದ್ ಮಧ್ವರಾಜ್, ರುದ್ರಪ್ಪಲಮಾಣಿ ಅವರನ್ನು ಸಂಪುಟ ದರ್ಜೆಗೆ ಸಚಿವರನ್ನಾಗಿ ಬಡ್ತಿ ನೀಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ತೀರ್ಮಾನಿಸಿದ್ದಾರೆ. ಇಂದು ಸಂಜೆ 5 ಗಂಟೆಗೆ ರಾಜಭವನದಲ್ಲಿ ನಡೆಯಲಿರುವ ಸಮಾರಂಭದಲ್ಲಿ ನೂತನ ಸಚಿವರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ನಂತರ ಖಾತೆ ಹಂಚಿಕೆ ಕೂಡ ನಡೆಯಲಿದೆ.

ಗೃಹ ಖಾತೆಯನ್ನು ರಮಾನಾಥ್ ರೈ ಅವರಿಗೆ ನೀಡಲಾಗುವುದು ಎಂದು ಹೇಳಲಾಗಿದೆ. ಆದರೆ, ಕೊನೆ ಕ್ಷಣದ ಬದಲಾವಣೆ ಏನಾಗುತ್ತದೆ ಎಂದು ಈವರೆಗೂ ತಿಳಿದು ಬಂದಿಲ್ಲ. ಎಚ್.ಎಸ್.ಮಹದೇವಪ್ರಸಾದ್ ಅವರ ನಿಧನ, ಎಚ್.ವೈ.ಮೇಟಿ ಹಾಗೂ ಜಿ.ಪರಮೇಶ್ವರ್ ಅವರಿಂದ ತೆರವಾಗಿದ್ದ ಮೂರು ಸ್ಥಾನಗಳನ್ನು ಭರ್ತಿ ಮಾಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಒಂದು ತಿಂಗಳಿನಿಂದ ಕಸರತ್ತು ನಡೆಸಿದ್ದರು.

ಆಯಾ ಜಾತಿಯವರಿಗೆ ಈ ಸ್ಥಾನಗಳನ್ನು ನಿರ್ಧರಿಸಿದ್ದರು. ಈ ಹಿನ್ನೆಲೆಯಲ್ಲಿಯೇ ಸಚಿವ ಖಾತೆಯನ್ನು ಹಂಚಲಾಗಿದೆ. ಲಿಂಗಾಯಿತರ ಕೋಟಾದಲ್ಲಿ ಷಡಕ್ಷರಿ ಅವರಿಗೆ ಸಚಿವ ಸ್ಥಾನ ಸಿಗುತ್ತದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ, ಕೊನೆಯ ಕ್ಷಣದಲ್ಲಿ ಆದ ಬದಲಾವಣೆಯಿಂದ ಅವರಿಗೆ ಈ ಸ್ಥಾನ ಕೈ ತಪ್ಪಿದೆ.

Facebook Comments

Sri Raghav

Admin