ಐಎಸ್ ಉಗ್ರರ ನಾಯಕ ಅಬು ಬಕರ್ ಅಲ್-ಬಾಗ್ದಾದಿ ಇನ್ನೂ ಸತ್ತಿಲ್ಲ

ಈ ಸುದ್ದಿಯನ್ನು ಶೇರ್ ಮಾಡಿ

Abubakaer--01

ವಾಷಿಂಗ್ಟನ್, ಸೆ.1-ವಿಶ್ವದ ಅತ್ಯಂತ ಕ್ರೂರ ಭಯೋತ್ಪಾದನೆ ಸಂಘಟನೆಯಾದ ಇಸ್ಲಾಮಿಕ್ ಸ್ಟೇಟ್ (ಐಎಸ್) ನಾಯಕ ಅಬು ಬಕರ್ ಅಲ್-ಬಾಗ್ದಾದಿ ಸತ್ತಿದ್ದಾನೆಯೇ ಅಥವಾ ಬದುಕಿದ್ದಾನೆಯೇ ಎಂಬ ಗೊಂದಲಗಳು ಮುಂದುವರಿದಿದೆ. ಈ ಮಧ್ಯೆ ಅಮೆರಿಕದ ಉನ್ನತ ಸೇನಾ ಕಮ್ಯಾಂಡರ್ ಒಬ್ಬರು ಬಾಗ್ದಾದಿ ಇನ್ನೂ ಜೀವಂತವಾಗಿದ್ದಾನೆ ಎಂದು ಹೇಳಿಕೆ ನೀಡಿದ್ದಾರೆ.

ಕೆಲವು ತಿಂಗಳ ಹಿಂದೆ ರಷ್ಯಾ ನಡೆಸಿದ ಭಯೋತ್ಪಾದಕನೆ ನಿಗ್ರಹ ದಾಳಿಯಲ್ಲಿ ಆತ ಹತನಾಗಿದ್ದಾನೆ ಎಂದು ಮಾಸ್ಕೋ ಅಧಿಕಾರಿಗಳು ತಿಳಿಸಿದ್ದರು. ಆದರೆ ಆತ ಬದುಕಿದ್ದಾನೆ ಎಂಬ ಅಮೆರಿಕದ ಸೇನಾ ಲೆಫ್ಟಿನೆಂಟ್ ಜನರಲ್ ಸ್ಟೀಫನ್ ಟೌನ್‍ಸ್ಯಾಂಡ್ ಹೇಳಿರುವುದು ಮತ್ತೆ ಗೊಂದಲಕ್ಕೆ ಕಾರಣವಾಗಿದೆ.
ಈ ಹಿಂದೆಯೂ ಬಾಗ್ದಾದಿ ಯುದ್ಧ ವಿಮಾನ/ಡ್ರೋನ್ ದಾಳಿಯಲ್ಲಿ ಕೊಲ್ಲಲ್ಪಟ್ಟಿದ್ದಾನೆ ಎಂದು ಅಮೆರಿಕ ಸೇನೆಯೇ ಹೇಳಿತ್ತು. ಆದರೆ ಆತ ಮತ್ತೆ ಜೀವಂತವಾಗಿದ್ದಾನೆ ಎಂಬ ವರದಿಗಳು ಪ್ರಕಟಗೊಂಡಿದ್ದವು.

Facebook Comments

Sri Raghav

Admin