ಟೆಕ್ಸಾಸ್ : ರಾಸಾಯನಿ ಸ್ಥಾವರದಲ್ಲಿ ಭೀಕರ ಸ್ಫೋಟ, ನೆರೆ ಸಂತ್ರಸ್ತರ ಸ್ಥಳಾಂತರ

ಈ ಸುದ್ದಿಯನ್ನು ಶೇರ್ ಮಾಡಿ

Texas-01

ಹ್ಯೂಸ್ಟನ್, ಸೆ.1-ಹಾರ್ವೆ ಚಂಡಮಾರುತದಿಂದ ತತ್ತರಿಸಿರುವ ಅಮೆರಿಕದ ಟೆಕ್ಸಾಸ್‍ನಲ್ಲಿ ಮೃತರ ಸಂಖ್ಯೆ 46ಕ್ಕೇರಿದ್ದು, ಪ್ರವಾಹ ಪೀಡಿತ ರಾಸಾಯನಿಕ ಘಟಕವೊಂದರಲ್ಲಿ ಎರಡು ಪ್ರಬಲ ಸ್ಫೋಟಗಳು ಸಂಭವಿಸಿದೆ ಎಂದು ಸ್ಥಳೀಯ ತುರ್ತು ಪರಿಸ್ಥಿತಿ ನಿರ್ವಹಣೆ ಅಧಿಕಾರಿಗಳು ಹೇಳಿದ್ದಾರೆ. ಈ ದುರಂತದಲ್ಲಿ ಸಾವು-ನೋವಿನ ವರದಿಯಾಗಿಲ್ಲವಾದರೂ ಮತ್ತಷ್ಟು ಸ್ಫೋಟಗಳು ಸಂಭವಿಸುವ ಆತಂಕವಿದೆ. ಮುನ್ನೆಚ್ಚರಿಕೆ ಕ್ರಮವಾಗಿ, ಆರ್ಗಾನಿಕ್ ಪರಾಕ್ಸೈಡ್ ಸ್ಥಾವರದಿಂದ 3 ಕಿ.ಮೀ. ವ್ಯಾಪ್ತಿಯಲ್ಲಿ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸುವಂತೆ ಅಧಿಕಾರಿಗಳು ಸೂಚನೆ ನೀಡಿದ್ದಾರೆ. ಭೀಕರ ಪ್ರವಾಹದಿಂದ ಕಂಗೆಟ್ಟಿರುವ ಸಂತ್ರಸ್ತರಿಗೆ ರಾಸಾಯನಿಕ ಸ್ಫೋಟಗಳು ಆತಂಕ ತಂದೊಡ್ಡಿವೆ.

ನೀರಿನಿಂದ ಆವೃತವಾಗಿರುವ ಇನ್ನೂ ಕೆಲವು ಸ್ಥಾವರಗಳು ಆಸ್ಫೋಟಗೊಳ್ಳುವ ಸಾಧ್ಯತೆ ಇದ್ದು, ರಕ್ಷಣಾ ಕಾರ್ಯಕರ್ತರು ಪರಿಸ್ಥಿತಿ ಎದುರಿಸಲು ಸಜ್ಜಾಗಿದ್ದಾರೆ. ಈ ಮಧ್ಯೆ ಭೀಕರ ಚಂಡಮಾರುತ ಮತ್ತು ನೆರೆ ಹಾವಳಿಯಿಂದ ನಲುಗಿರುವ ಸಂತ್ರಸ್ತರನ್ನು ಭೇಟಿ ಮಾಡಿದ ಅಮೆರಿಕ ಉಪಾಧ್ಯಕ್ಷ ಮೈಕ್ ಪೆನ್ಸ್, ಅಗತ್ಯವಾದ ಎಲ್ಲ ನೆರವಿನ ಭರವಸೆ ನೀಡಿದ್ದಾರೆ.   ಸಂಪುಟದ ಕೆಲವು ಸಚಿವರೊಂದಿಗೆ ಪೆನ್ಸ್ ಅವರು ಕಾರ್ಪಸ್ ಕ್ರಿಸ್ಟಿ ಪ್ರದೇಶದಲ್ಲಿ ಸಂತ್ರಸ್ತರಿಗೆ ಸಾಂತ್ವನ ಹೇಳಿ ಸರ್ಕಾರದ ನೆರವು ಮತ್ತು ಪರಿಹಾರವನ್ನು ಘೋಷಿಸಿದರು.

Facebook Comments

Sri Raghav

Admin