ನಾಡಹಬ್ಬ ದಸರೆಗೆ ಖ್ಯಾತ ಸಂಗೀತಗಾರರಿಗೆ ಆಹ್ವಾನ

ಈ ಸುದ್ದಿಯನ್ನು ಶೇರ್ ಮಾಡಿ

ಮೈಸೂರು,ಸೆ.01- ನಾಡಹಬ್ಬ ದಸರಾ ಕಾರ್ಯಕ್ರಮಕ್ಕೆ ಸಂಗೀತ ಕ್ಷೇತ್ರದ ದಿಗ್ಗಜರನ್ನು ಆಹ್ವಾನಿಸಲು ದಸರಾ ಮಹೋತ್ಸವ ಸಮಿತಿ ನಿರ್ಧರಿಸಿದೆ.
ಯುವ ದಸರಾ ಹಾಗೂ ವಿವಿಧ ವೇದಿಕೆಯಲ್ಲಿ ನಡೆಯುವ ಕಾರ್ಯಕ್ರಮಗಳಿಗೆ ಹಂಸಲೇಖ, ಇಳಯರಾಜ, ಹರ್ಮಾನ್‍ಮಲೀಕ್ ಸೇರಿದಂತೆ ಸಂಗೀತ ಕ್ಷೇತ್ರದ ದಿಗ್ಗಜರನ್ನು ಆಹ್ವಾನಿಸಲು ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ತೀರ್ಮಾನಿಸಲಾಗಿದೆ.ಜಿಲ್ಲಾಧಿಕಾರಿ ರಂದೀಪ್ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ನಗರದ ಮಹಾರಾಜ ಕಾಲೇಜು ಮೈದಾನದಲ್ಲಿ ಸೆ.22ರಿಂದ 28ರವರೆಗೆ ನಡೆಯುವ ಯುವ ದಸರಾಕ್ಕೆ ಪ್ರಸಿದ್ಧ ಕಲಾವಿದರನ್ನು ಆಹ್ವಾನಿಸಲಾಗುವುದು ಎಂದು ತಿಳಿಸಿದರು.

ಸೆ.21ರಿಂದ 28ರವರೆಗೆ ಅರಮನೆ ಮುಂಭಾಗದ ವೇದಿಕೆಯಲ್ಲಿ ನಡೆಯುವ ಸಾಂಸ್ಕøತಿಕ ಕಾರ್ಯಕ್ರಮದಲ್ಲಿ ಕರ್ನಾಟಕ ಸಂಗೀತ, ಹಿಂದೂಸ್ತಾನಿ ಸಂಗೀತ, ಸುಗಮ ಸಂಗೀತ, ಜಾನಪದ ಸಂಗೀತ ಕ್ಷೇತ್ರಗಳಲ್ಲಿ ಪ್ರಖ್ಯಾತರಾಗಿರುವ ಕಲಾವಿದರನ್ನು ಆಹ್ವಾನಿಸಲು ಜಿಲ್ಲಾಧಿಕಾರಿಗಳು ಸೂಚಿಸಿದ್ದಾರೆ. ಪ್ರಖ್ಯಾತ ಗಾಯಕರಾದ ಎಸ್.ಪಿ.ಬಾಲಸುಬ್ರಮಣ್ಯಂ, ಸಂಗೀತ ನಿರ್ದೇಶಕ ಹಂಸಲೇಖ, ಸ್ಯಾಕ್ಸೋಫೋನ್ ವಾದಕ ಕದರಿ ಗೋಪಾಲನಾಥ, ಕೊಳಲು ವಾದಕರಾದ ಹರಿಪ್ರಸಾದ್ ಚೌರಾಸಿಯ ಸೇರಿದಂತೆ ಖ್ಯಾತ ಕಲಾವಿದರನ್ನು ಆಹ್ವಾನಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದರು.

7ದಿನ ನಡೆಯುವ ಈ ಯುವ ದಸರಾ ಕಾರ್ಯಕ್ರಮ ಸೆ.22 ರಂದು ಅರಮಾನ್‍ನಲ್ಲಿ, 23ರಂದು ಅಂಕಿತ್ ವಿವಾರಿ, 24 ರಂದು ಕೋಕ್ ಸ್ಟುಡಿಯೋ, 25 ರಮದು ಅರ್ಜುನ್ ಜನ್ಯ ಮತ್ತು ತಂಡದವರಿಂದ 26ರಂದು ನೀಡಿ ಮೋಹನ್, 27 ರಂದು ಪಲಕ್ ಮುಚ್ಚಳ್, 28ರಂದು ಸ್ಯಾಂಡಲ್‍ವುಡ್ ನೈಟ್ಸ್ ಕಾರ್ಯಕ್ರಮ ನಡೆಯಲಿದೆ ಎಂದು ಮಾಹಿತಿ ನೀಡಿದರು.

Facebook Comments

Sri Raghav

Admin