ನ್ಯಾಯಕ್ಕಾಗಿ ಹೋರಾಡುತ್ತಿರುವ ಆಧುನಿಕ ಶ್ರವಣಕುಮಾರ..!

ಈ ಸುದ್ದಿಯನ್ನು ಶೇರ್ ಮಾಡಿ

Kartik-Singh--01

ಮಯೂರ್‍ಭಂಜ್, ಸೆ.1- ಅಂಧರಾದ ತನ್ನ ತಂದೆ-ತಾಯಿಗಳಿಗೆ ಪುಣ್ಯಕ್ಷೇತ್ರಗಳ ದರುಶನ ಮಾಡಿಸಲು ಶ್ರವಣಕುಮಾರ ಮರದ ಬುಟ್ಟಿಗಳಲ್ಲಿ ಹೆತ್ತವರನ್ನು ಕೂರಿಸಿಕೊಂಡು ಕಾಲ್ನಡಿಗೆಯಲ್ಲಿ ಪಾದಯಾತ್ರೆ ಮಾಡಿದ ಪುಣ್ಯ ಕಥೆಯನ್ನು ನೆನಪಿಸುವ ಪ್ರಕರಣವೊಂದು ಒಡಿಶಾದಲ್ಲಿ ಜರುಗಿದೆ. ಆದರೆ, ಈ ಆಧುನಿಕ ಶ್ರವಣಕುಮಾರ ನ್ಯಾಯಕ್ಕಾಗಿ ತನ್ನ ವೃದ್ಧ ತಂದೆ-ತಾಯಿಗಳನ್ನು ಮರದ ಬುಟ್ಟಿಯಲ್ಲಿ ಕೂರಿಸಿ ಹೆಗಲಿನಿಂದ ಹೊತ್ತುಕೊಂಡು 40 ಕಿಲೋ ಮೀಟರ್ ನಡೆದ ವ್ಯಥೆ ಇದಾಗಿದೆ.

ಒಡಿಶಾದ ಮಯೂರ್‍ಭಂಜ್ ಜಿಲ್ಲೆಯ ಮೊರಾದ ಗ್ರಾಮದ ಕಾರ್ತಿಕ್‍ಸಿಂಗ್ ವಿರುದ್ಧ ಪೊಲೀಸರು ಸುಳ್ಳು ಮೊಕದ್ದಮೆ ದಾಖಲಿಸಿ 18 ದಿನಗಳ ಕಾಲ ಜೈಲಿಗೆ ಕಳುಹಿಸಿದ್ದರು. ಈ ಘಟನೆ ನಂತರ ಗ್ರಾಮಸ್ಥರು ಆತ ಮತ್ತು ಆತನ ವೃದ್ಧ ತಂದೆ-ತಾಯಿಗಳಿಗೆ ಸಮಾಜದಿಂದ ಬಹಿಷ್ಕಾರ ಹಾಕಿದ್ದರು. ತತ್ಪರಿಣಾಮವಾಗಿ ವಿದ್ಯಾವಂತನಾದ ಕಾರ್ತಿಕ್‍ಸಿಂಗ್‍ಗೆ ಗ್ರಾಮದಲ್ಲಿ ಯಾವುದೇ ಕೆಲಸ, ಅನ್ನ-ನೀರು, ಆಶ್ರಯ ಲಭಿಸಿಲ್ಲ.

ತನಗೆ ಬಂದಿರುವ ದುರ್ಗತಿ ಬಗ್ಗೆ ಸರ್ಕಾರದ ಗಮನ ಸೆಳೆಯಲು ಈತ ಆಧುನಿಕ ಶ್ರವಣಕುಮಾರನಂತೆ ತನ್ನ ವೃದ್ಧ ತಂದೆ-ತಾಯಿಗಳನ್ನು ಮರದ ಬುಟ್ಟಿಗಳಲ್ಲಿ ಕೂರಿಸಿಕೊಂಡು 40 ಕಿಲೋ ಮೀಟರ್ ಪಾದಯಾತ್ರೆ ನಡೆಸಿದ್ದಾರೆ.  ಈ ಘಟನೆ ನಂತರ ಈತನ ಪರ ವಕಾಲತು ವಹಿಸಲು ಕೆಲವು ವಕೀಲರು ಮತ್ತು ಸಾಮಾಜಿಕ ಕಾರ್ಯಕರ್ತರು ಮುಂದೆ ಬಂದಿದ್ದಾರೆ.

Facebook Comments

Sri Raghav

Admin