ಫೇಸ್‍ಬುಕ್‍ನಲ್ಲಿ ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿದ ಆರೋಪಿಗಾಗಿ ಶೋಧ

ಈ ಸುದ್ದಿಯನ್ನು ಶೇರ್ ಮಾಡಿ

Facebook--01

ಕೋಲಾರ,ಸೆ.01- ಫೇಸ್‍ಬುಕ್‍ನಲ್ಲಿ ಯುವಕನೊಬ್ಬ ರಾಷ್ಟ್ರಧ್ವಜವನ್ನು ಅವಹೇಳನಕಾರಿಯಾಗಿ ಪ್ರಕಟಿಸಿರುವುದಕ್ಕೆ ಸಂಬಂಧಿಸಿದಂತೆ ಮಾಲೂರು ಪೊಲೀಸ್ ಠಾಣೆಯಲ್ಲಿ ಆರೋಪಿಯ ವಿರುದ್ಧ ದೇಶದ್ರೋಹ ಪ್ರಕರಣದ ದೂರು ದಾಖಲಾಗಿದೆ. ಮಾಲೂರು ಪಟ್ಟಣದ ಗ್ಲಾಸ್ ಹಾಗೂ ಗ್ಯಾರೇಜ್‍ನಲ್ಲಿ ಕೆಲಸ ಮಾಡುವ ಸಾಧಿಕ್ ಶೇಕ್ ಎಂಬ ಯುವಕನ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಾಗಿದೆ. ಆರೋಪಿ ಸಾಧಿಕ್ ಶೇಕ್ ತನ್ನ ಫೇಸ್‍ಬುಕ್ ಖಾತೆಯಲ್ಲಿ ಪಾಕಿಸ್ತಾನ ಬಾವುಟವಿರುವ ಗಿಡುಗ ಪಕ್ಷಿಯು ಭಾರತದ ಬಾವುಟವಿರುವ ಪಾರಿವಾಳ ಪಕ್ಷಿಯ ತಲೆಯನ್ನು ಕುಕ್ಕುತ್ತಿರುವ ಚಿತ್ರವನ್ನು ನಿನ್ನೆ ಪೋಸ್ಟ್ ಮಾಡಿದ್ದಾನೆ.

ಇದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಆರೋಪಿಯ ವಿರುದ್ಧ ನಿನ್ನೆ ಮಾಲೂರಿನ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತಲೆ ಮರೆಸಿಕೊಂಡಿರುವ ಆರೋಪಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.

Facebook Comments

Sri Raghav

Admin