ಮುಂಬೈ ಕಟ್ಟಡ ಕುಸಿತ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 33ಕ್ಕೇರಿಕೆ

ಈ ಸುದ್ದಿಯನ್ನು ಶೇರ್ ಮಾಡಿ

Mumbai--04

ಮುಂಬೈ. ಸೆ.1-ದಕ್ಷಿಣ ಮುಂಬೈನ ಭೆಂಡಿ ಬಜಾರ್‍ನಲ್ಲಿ ನಿನ್ನೆ ಬೆಳಿಗ್ಗೆ ಐದು ಮಹಡಿಗಳ ಕಟ್ಟಡ ಕುಸಿದು ಸಂಭವಿಸಿದ ಘೋರ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 33ಕ್ಕೇರಿದೆ. ಇಡೀ ರಾತ್ರಿ ನಡೆದ ಕಾರ್ಯಾಚರಣೆಯಲ್ಲಿ ಇನ್ನೂ ಒಂಭತ್ತು ಮೃತದೇಹಗಳು ಪತ್ತೆಯಾದವು. ಈವರೆಗೆ ಈ ದುರ್ಘಟನೆಯಲ್ಲಿ 24 ಪುರುಷರು ಮತ್ತು 9 ಮಹಿಳೆಯರು ಅಸುನೀಗಿದ್ಧಾರೆ ಎಂದು ಅಗ್ನಿ ಶಾಮಕ ದಳದ ಅಧಿಕಾರಿಗಳು ತಿಳಿಸಿದ್ದಾರೆ. ಕಟ್ಟಡ ಆವಶೇಷಗಳ ಅಡಿಯಿಂದ ರಕ್ಷಿಸಲಾದ ಇನ್ನೂ ಒಂಭತ್ತು ಜನರನ್ನು ಸಮೀಪದ ಜೆ.ಜೆ.ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರಲ್ಲಿ ಕೆಲವರ ಸ್ಥಿತಿ ಗಂಭೀರವಾಗಿದೆ.

Mumbai--02

ಜನಸಂದಣಿಯ ಈ ಪ್ರದೇಶದಲ್ಲಿ ಉರುಳಿ ಬಿದ್ದ 117 ವರ್ಷಗಳಷ್ಟು ಹಳೆಯದಾದ ಕಟ್ಟಡದ ಭಗ್ನಾವಶೇಷಗಳ ಅಡಿ ಸಿಲುಕಿರಬಹುದಾದ ಮತ್ತಷ್ಟು ಜನರಿಗಾಗಿ ಶೋಧ ಮುಂದುವರಿದಿದೆ. ರಕ್ಷಣಾ ಕಾರ್ಯಾಚರಣೆ ವೇಲೆ ಅಗ್ನಿಶಾಮಕ ದಳದ ಆರು ಸಿಬ್ಬಂದಿ ಹಾಗೂ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ (ಎನ್‍ಡಿಆರ್‍ಎಫ್) ಒಬ್ಬ ಯೋಧನಿಗೆ ಗಾಯಗಳಾಗಿವೆ. ಎಂಟು ಅಗ್ನಿಶಾಮಕ ವಾಹನಗಳು, ಒಂದು ರಕ್ಷಣಾ ವ್ಯಾನ್, ಮತ್ತು ಅಂಬ್ಯುಲೆನ್ಸ್‍ನನ್ನು ಸ್ಥಳದಲ್ಲಿ ಇರಿಸಲಾಗಿದ್ದು, ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಯಲ್ಲಿ ಸಿಬ್ಬಂದಿ ತೊಡಗಿದ್ದಾರೆ.

Mumbai--01

ಭಾರೀ ಮಳೆಯಿಂದಾಗಿ ಈ ಪುರಾತನ ಕಟ್ಟಡ ಶಿಥಿಲಗೊಂಡು ನಿನ್ನೆ ಬೆಳಗ್ಗೆ ಕುಸಿದು ಬಿದ್ದು. ಈ ಕಟ್ಟಡದಲ್ಲಿ 12 ಕೊಠಡಿಗಳು, ಆರು ಗೋದಾಮುಗಳು ಮತ್ತು ಒಂದು ಪ್ಲೇ ಹೋಮ್ ಇತ್ತು.

Facebook Comments

Sri Raghav

Admin