ಯುವಕನ ಶಿರಚ್ಛೇದ ಮಾಡಿದ್ದ ಆರೋಪಿ ಅಪಘಾತದಲ್ಲಿ ಸಾವು

ಈ ಸುದ್ದಿಯನ್ನು ಶೇರ್ ಮಾಡಿ

Accident--01

ಚನ್ನರಾಯಪಟ್ಟಣ,ಸೆ.01- ತಾಲೂಕಿನ ಎ.ಕಾಳೇನಹಳ್ಳಿಯಲ್ಲಿ ನಡೆದಿದ್ದ, ಯುವಕನೊಬ್ಬನ ಶಿರಚ್ಛೇದ ಪ್ರಕರಣ ಕೊಲೆ ಆರೋಪಿ ಸಾವಿನೊಂದಿಗೆ ಈಗ ಹೊಸ ತಿರುವು ಪಡೆದುಕೊಂಡಿದೆ. ಎ.ಕಾಳೇನಹಳ್ಳಿ ವಾಸಿ ನವೀನ್ ಎಂಬ ಯವಕನ ರುಂಡ ಕತ್ತರಿಸಿ ಭೀಕರವಾಗಿ ಹತ್ಯೆ ಮಾಡಿದ್ದ ಆರೋಪಿ ಅನಿಲ್ ನಿನ್ನೆ ರಾತ್ರಿ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಬರಗೂರು ಹ್ಯಾಂಡ್‍ಪೋಸ್ಟ್ ಬಳಿ ವಾಹನವೊಂದು ಡಿಕ್ಕಿ ಹೊಡೆದು ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಕೊಲೆ ಆರೋಪಿ ಅನಿಲ್ ಪೊಲೀಸರಿಂದ ತಪ್ಪಿಸಿಕೊಳ್ಳುವ ಪ್ರಯತ್ನದಲ್ಲಿ ಈ ದುರಂತ ಸಾವಿಗಿಡಗಿದ್ದಾನೆ. ಕಳೆದ ಮೂರು ದಿನಗಳ ಹಿಂದೆ ಅನಿಲ್ ಮತ್ತೊಬ್ಬ ಯುವಕ ನವೀನ್‍ನನ್ನು ಹತ್ಯೆ ಮಾಡಿದ್ದ. ತನ್ನೊಂದಿಗೆ ನಿಶ್ಚಿತಾರ್ಥವಾಗಿದ್ದ ಯುವತಿಯ ಜೊತೆ ನವೀನ್ ಫೋನ್ ಚಾಟಿಂಗ್ ನಡೆಸಿದ್ದೆ ಈ ಹತ್ಯೆಗೆ ಕಾರಣ ಎಂದು ವರದಿಯಾಗಿತ್ತು. ನವೀನ್ ಕೊಲೆ ನಂತರ ಅನಿಲ್ ಎ.ಕಾಳೇನಹಳ್ಳಿಯಿಂದ ನಾಪತ್ತೆಯಾಗಿದ್ದ. ಇದೇ ವೇಳೆ ಧರ್ಮಸ್ಥಳಕ್ಕೆ ಹೋಗಿ ಮಂಜುನಾಥನಿಗೆ ಮುಡಿಯನ್ನು ಕೊಟ್ಟು ಬಂದಿದ್ದ ಎಂದು ಹೇಳಲಾಗಿದೆ.

ಪ್ರಸ್ತುತ ಕೊಲೆ ಆರೋಪಿಯೂ ಮೃತಪಟ್ಟಿದ್ದು ಇವನ ಸಾವಿನೊಂದಿಗೆ ಕೊಲೆಗಿಡಾಗಿದ್ದ ನವೀನ್‍ನ ರುಂಡವೂ ನಾಪತ್ತೆಯಾಗಿದೆ. ಸದ್ಯ ಅಪಘಾತಕೀಡಾದ ಆರೋಪಿ ಅನಿಲ್‍ನ ಮೃತ ದೇಹವನ್ನು ಹಾಸನ ಸರ್ಕಾರಿ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ. ಬುಧವಾರ ನಡೆದಿದ್ದ ಈ ಭೀಕರ ಘಟನೆ ಇಡೀ ಚನ್ನರಾಯಪಟ್ಟಣ ತಾಲೂಕಿನ ಜನ ಬೆಚ್ಚಿಬಿಳುವಂತೆ ಮಾಡಿತ್ತು.

Facebook Comments

Sri Raghav

Admin