ರಮಾನಾಥ ರೈ ಗೆ ಗೃಹ ಖಾತೆ ಗ್ಯಾರಂಟಿ

ಈ ಸುದ್ದಿಯನ್ನು ಶೇರ್ ಮಾಡಿ

Ramanath-Rai--01

ಬೆಂಗಳೂರು, ಸೆ.1-ಅರಣ್ಯ ಸಚಿವ ರಮಾನಾಥ ರೈ ಅವರಿಗೆ ಗೃಹ ಖಾತೆ ನೀಡುವುದು ಬಹುತೇಕ ಖಚಿತವಾಗಿದೆ. ಡಾ.ಜಿ.ಪರಮೇಶ್ವರ್ ಅವರ ರಾಜೀನಾಮೆಯಿಂದ ತೆರವಾಗಿದ್ದ ಗೃಹ ಸಚಿವ ಸ್ಥಾನವನ್ನು ಹಿರಿಯ ಸಚಿವ ರಮಾನಾಥ್ ರೈ ಅವರಿಗೆ ನೀಡಲು ಮುಖ್ಯಮಂತ್ರಿಗಳು ನಿರ್ಧರಿಸಿದ್ದಾರೆ ಎಂದು ತಿಳಿದುಬಂದಿದೆ. ಅರಣ್ಯ ಖಾತೆಯನ್ನು ನೂತನ ಸಚಿವ ರೇವಣ್ಣ ಅವರಿಗೆ ನೀಡಿ ರಮಾನಾಥರೈ ಅವರಿಗೆ ಗೃಹ ಖಾತೆ ನೀಡಲು ತೀರ್ಮಾನಿಸಲಾಗಿದೆ. ನಿನ್ನೆ ಹಿರಿಯ ಸಚಿವರಾದ ರಾಮಲಿಂಗಾರೆಡ್ಡಿ, ರಮಾನಾಥರೈ ಅವರನ್ನು ನಿವಾಸಕ್ಕೆ ಕರೆಸಿಕೊಂಡು ಗೃಹ ಖಾತೆ ನಿರ್ವಹಣೆ ಬಗ್ಗೆ ಮಾತುಕತೆ ನಡೆಸಿದರು. ರಮಾನಾಥರೈ ಅವರು ಈ ಖಾತೆಯನ್ನು ನಿರ್ವಹಿಸುವ ಬಗ್ಗೆ ಸಿದ್ದರಾಮಯ್ಯನವರಿಗೆ ತಿಳಿಸಿದ ಹಿನ್ನೆಲೆಯಲ್ಲಿ ರೈ ಅವರಿಗೆ ಈ ಖಾತೆ ನೀಡಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.

ಗೃಹ ಸಚಿವರ ಸಲಹೆಗಾರರಾಗಿದ್ದ ಕೆಂಪಯ್ಯ ಅವರು ಈಗಾಗಲೇ ರಮಾನಾಥರೈ ಅವರನ್ನು ಭೇಟಿ ಮಾಡಿ ಶುಭಾಶಯ ಕೋರಿದ್ದಾರೆ.
ಕಳೆದ ಒಂದು ತಿಂಗಳಿನಿಂದ ಸಂಪುಟದ ಹಿರಿಯ ಸಚಿವರೊಬ್ಬರಿಗೆ ಗೃಹ ಖಾತೆ ನೀಡಬೇಕೆಂಬುದು ಮುಖ್ಯಮಂತ್ರಿಗಳ ಇರಾದೆಯಾಗಿತ್ತು. ರಮೇಶ್‍ಕುಮಾರ್, ಆರ್.ವಿ.ದೇಶಪಾಂಡೆ, ರಾಮಲಿಂಗಾರೆಡ್ಡಿ ಸೇರಿದಂತೆ ಹಲವರೊಂದಿಗೆ ರಮಾನಾಥರೈ ಮಾತುಕತೆ ನಡೆಸಿದ್ದರು.
ಚುನಾವಣಾ ಸಂದರ್ಭದಲ್ಲಿ ಪರಿಣಾಮಕಾರಿಯಾಗಿ ಗೃಹ ಖಾತೆಯನ್ನು ನಿರ್ವಹಿಸಬೇಕೆಂಬ ಹಿನ್ನೆಲೆಯಲ್ಲಿ ರಮಾನಾಥರೈ ಅವರಿಗೆ ಈ ಖಾತೆ ಕೊಡಲು ನಿರ್ಧರಿಸಿದ್ದು, ಇಂದು ಸಚಿವ ಸಂಪುಟ ವಿಸ್ತರಣೆಯ ನಂತರ ಖಾತೆಗಳ ಹಂಚಿಕೆ ಸಂದರ್ಭದಲ್ಲಿ ರಮಾನಾಥರೈ ಅವರಿಗೆ ಗೃಹಖಾತೆಯನ್ನು ನೀಡುವ ಸಾಧ್ಯತೆ ಇದೆ.

Facebook Comments

Sri Raghav

Admin