ರೇಪಿಸ್ಟ್ ಬಾಬಾ ಗುರ್ಮೀತ್ ರಾಮ್ ರಹೀಂನ ದತ್ತುಪುತ್ರಿಗಾಗಿ ತೀವ್ರ ಶೋಧ

Ram-Rahim--01

ಪಂಚಕುಲಾ,ಸೆ.1-ಅತ್ಯಾಚಾರ ಆರೋಪಗಳ ಮೇಲೆ 20 ವರ್ಷ ಜೈಲು ಶಿಕ್ಷೆಗೆ ಗುರಿಯಾಗಿ ಜೈಲು ಪಾಲಾದ ಸ್ವಯಂಘೋಷಿತ ದೇವಮಾನವ ಬಾಬಾ ಗುರ್ಮೀತ್ ರಾಮ್ ರಹೀಂ ಸಿಂಗ್‍ನ ದತ್ತುಪುತ್ರಿ ಹನಿಪ್ರೀತ್ ಸಿಂಗ್ ಮತ್ತು ದತ್ತುಪುತ್ರ ಅದಿತ್ಯ ಇನ್ಸಾನ್‍ಗಾಗಿ ಪೊಲೀಸರು ತೀವ್ರ ಶೋಧ ನಡೆಸುತ್ತಿದ್ದು ಯಾವುದೇ ಕ್ಷಣದಲ್ಲಿ ಬಂಧನಕ್ಕೆ ಒಳಗಾಗುವ ಸಾಧ್ಯತೆ ಇದೆ.  ಇವರಿಬ್ಬರಿಗಾಗಿ ಲುಕ್‍ಔಟ್ ನೋಟಿಸ್‍ಗಳನ್ನು ಜಾ ರಿಗೊಳಿಸಲಾಗಿದೆ ಎಂದು ಹರ್ಯಾಣದ ಪಂಚಕುಲಾ ಪೊಲೀಸ್ ಕಮಿಷನರ್ ಎ. ಎಸ್.ಚಾವ್ಲಾ ಹೇಳಿದ್ದಾರೆ.

ಹನಿಪ್ರೀತ್ ಮತ್ತು ಆದಿತ್ಯ ಕೆಲವು ದಿನಗಳಿಂದ ತಲೆ ಮರೆಸಿಕೊಂಡಿದ್ದು, ಡೇರಾ ಸಚ್ಚಾ ಸೌಧ (ಡಿಎಸ್‍ಎಸ್) ಬೆಂಬಲಿಗರ ಮನೆಗಳಲ್ಲಿ ಅಡಗಿರುವ ಸಾಧ್ಯತೆ ಇದ್ದು, ಶೋಧ ಮುಂದುವರಿದಿದೆ.  ಕಳೆದ ಶುಕ್ರವಾರ ಅತ್ಯಾಚಾರ ಪ್ರಕರಣಗಳಲ್ಲಿ ಬಾಬಾ ದೋಷಿ ಎಂದು ತೀರ್ಪು ಹೊರ ಬಿದ್ದ ನಂತರ ಪಂಚಕುಲ ಕೋರ್ಟ್ ಸಂಕೀರ್ಣದಿಂದ ಬಾಬಾ ಜೊತೆ ಹೆಲಿಕಾಪ್ಟರ್‍ನಲ್ಲಿ ತೆರಳಲು ಹನಿಪ್ರೀತ್‍ಗೆ ಅವಕಾಶ ಲಭಿಸಿದ್ದು ಹೇಗೆ ಎಂಬ ಬಗ್ಗೆ ಸರ್ಕಾರ ತನಿಖೆ ನಡೆಸುತ್ತಿದೆ.
ಹನಿಪ್ರೀತ್ ಮತ್ತು ಆದಿತ್ಯ ಇವರಿಬ್ಬರು ಬಾಬಾ ತಪ್ಪಿಸಿಕೊಳ್ಳಲು ನೆರವಾಗುವುದಕ್ಕೆ ಸಂಚು ರೂಪಿಸಿದ್ದರು ಎಂಬ ಆರೋಪವೂ ಇದೆ.

Facebook Comments

Sri Raghav

Admin