ಶಾಲಾ ಬಸ್ ಉರುಳಿ 11 ಮಂದಿ ವಿದ್ಯಾರ್ಥಿನಿಯರ ಸಾವು

ಈ ಸುದ್ದಿಯನ್ನು ಶೇರ್ ಮಾಡಿ

Bus-Acci

ತೆಹರಾನ್, ಸೆ.1-ಚಾಲಕನ ನಿಯಂತ್ರಣ ತಪ್ಪಿ ಶಾಲಾ ಬಸ್ ಉರುಳಿ ಬಿದ್ದ ಪರಿಣಾಮ 11 ಮಂದಿ ಶಾಲಾ ವಿದ್ಯಾರ್ಥಿನಿಯರು ಸಾವನ್ನಪ್ಪಿ 30 ಮಂದಿ ಗಾಯಗೊಂಡಿರುವ ಭೀಕರ ಘಟನೆ ಇರಾನ್‍ನ ಶಿರಾಜ್ ಬಳಿ ಇಂದು ಮುಂಜಾನೆ ನಡೆದಿದೆ. ಕ್ರೀಡೆ ಹಾಗೂ ಸಾಂಸ್ಕøತಿಕ ಕಾರ್ಯಕ್ರಮಗಳ ನಿಮಿತ್ತ ಶಾಲಾ ಮಕ್ಕಳು ಶಿರಾಜ್ ನಗರಕ್ಕೆ ಶಾಲಾ ಬಸ್ ಮೂಲಕ ತೆರಳಿದ್ದರು. ಇಂದು ಮುಂಜಾನೆ 4ರ ಸಮಯದಲ್ಲಿ ವೇಗವಾಗಿ ಚಲಿಸುತ್ತಿದ್ದ ಬಸ್ ಚಾಲಕನ ನಿಯಂತ್ರಣ ತಪ್ಪಿ ಉರುಳಿಬಿದ್ದಿದೆ. ಇದರ ಪರಿಣಾಮ 11 ಮಂದಿ ವಿದ್ಯಾರ್ಥಿನಿಯರು ಸಾವನ್ನಪ್ಪಿದ್ದು, 30 ಮಂದಿ ಗಾಯಗೊಂಡಿದ್ದಾರೆ. ಇದರಲ್ಲಿ 13 ಮಂದಿಯ ಸ್ಥಿತಿ ಗಂಭೀರವಾಗಿದೆ. ಇರಾನ್‍ನಲ್ಲಿ ರಸ್ತೆಗಳು ಉತ್ತಮವಾಗಿದ್ದರೂ ಸಂಚಾರಿ ಸುರಕ್ಷತೆ ಇಲ್ಲ ಎಂದು ಸುದ್ದಿವಾಹಿನಿಯೊಂದು ತಿಳಿಸಿದೆ.

Facebook Comments

Sri Raghav

Admin