ಶ್ರೀಲಂಕಾ ಅಧ್ಯಕ್ಷರ ಜೊತೆ ಸುಷ್ಮಾ ಭೇಟಿ : ದ್ವಿಪಕ್ಷೀಯ ಸಹಕಾರ ಕುರಿತು ಚರ್ಚೆ

ಈ ಸುದ್ದಿಯನ್ನು ಶೇರ್ ಮಾಡಿ

Sushama-swaraj

ಕೊಲೊಂಬೊ, ಸೆ.1-ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಇಂದು ಶ್ರೀಲಂಕಾ ರಾಜಧಾನಿ ಕೊಲೊಂಬೊದಲ್ಲಿ ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ ಅವರನ್ನು ಭೇಟಿ ಮಾಡಿ ಪರಸ್ಪರ ಸಹಕಾರದ ದ್ವಿಪಕ್ಷೀಯ ವಿಷಯಗಳ ಕುರಿತು ಸಮಾಲೋಚನೆ ನಡೆಸಿದರು.  ಎರಡು ದಿನ ನಡೆಯಲಿರುವ ದ್ವಿತೀಯ ಭಾರತೀಯ ಸಾಗರ ಸಮಾವೇಶಕ್ಕಾಗಿ ಕೊಲೊಂಬೊದಲ್ಲಿರುವ ಸಚಿವರು ದ್ವೀಪರಾಷ್ಟ್ರದ ಅಧ್ಯಕ್ಷರನ್ನು ಭೇಟಿ ಮಾಡಿ ಮಹತ್ವದ ದ್ವಿಪಕ್ಷೀಯ ಸಂಬಂಧ ಸುಧಾರಣೆ ಕುರಿತು ಚರ್ಚಿಸಿದರು ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರವೀಶ್ ಕುಮಾರ್ ಟ್ವೀಟ್ ಮಾಡಿದ್ದಾರೆ.

ಇದಕ್ಕೂ ಮುನ್ನ ಸುಷ್ಮಾ ಶ್ರೀಲಂಕಾದ ವಿದೇಶಾಂಗ ಸಚಿವ ತಿಲಕ್ ಮಾರಾಪನ ಅವರನ್ನು ಸಹ ಭೇಟಿ ಮಾಡಿ ಬಾಂಧವ್ಯ ವೃದ್ದಿ ಕುರಿತ ಮಾತುಕತೆ ನಡೆಸಿದರು.

Facebook Comments

Sri Raghav

Admin