ಸಂಪುಟ ವಿಸ್ತರಣೆ ಬೆನ್ನಲ್ಲೇ ಭುಗಿಲೆದ್ದ ಅಸಮಾಧಾನ ಹೊಗೆ

ಈ ಸುದ್ದಿಯನ್ನು ಶೇರ್ ಮಾಡಿ

Siddaramaiah-01

ಬೆಂಗಳೂರು, ಸೆ.1-ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ಸಂಜೆ ಸಂಪುಟ ವಿಸ್ತರಣೆ ಮಾಡುತ್ತಿರುವ ಬೆನ್ನಲ್ಲೇ ಹಲವು ಆಕಾಂಕ್ಷಿಗಳಿಂದ ಕಾಂಗ್ರೆಸ್ ಪಕ್ಷದಲ್ಲಿ ಅಸಮಾಧಾನ ಹೊಗೆ ಭುಗಿಲೆದ್ದಿದೆ. ಸಹಜವಾಗಿಯೇ ಸಂಪುಟ ಸೇರುವ ಆಕಾಂಕ್ಷಿಗಳ ಪಟ್ಟಿ ದೊಡ್ಡದಾಗಿತ್ತು. ಆದರೆ ಕೊನೆ ಘಳಿಗೆ ವರೆಗೂ ಪ್ರಯತ್ನ ನಡೆಸಿ ಫಲ ನೀಡದ ಕಾರಣ ಹಲವರು ಅಸಮಾಧಾನಕ್ಕೆ ಒಳಗಾಗಿದ್ದಾರೆ.  ಕಾಂಗ್ರೆಸ್ ಸರ್ಕಾರದ ಕೊನೆ ಸಚಿವ ಸಂಪುಟ ವಿಸ್ತರಣೆ ಇದಾಗಿದ್ದು, ಈ ಸಂದರ್ಭದಲ್ಲಾದರೂ ಸಂಪುಟಕ್ಕೆ ಸೇರಬೇಕು ಎಂದು ಹಲವು ಹಿರಿಯರು ತೀವ್ರ ಲಾಬಿ ನಡೆಸಿದ್ದರು.

ಹೈಕಮಾಂಡ್ ಕೃಪಾಕಟಾಕ್ಷಕ್ಕಾಗಿ ಗಾಡ್‍ಫಾದರ್‍ಗಳ ಮೂಲಕ ದೆಹಲಿಯಲ್ಲಿ ತೀವ್ರ ಕಸರತ್ತು ಮಾಡಿದ್ದರು. ಆದರೆ ಯಾವ ಲಾಬಿ, ಪ್ರಯತ್ನವಿಲ್ಲದೆ, ಗೀತಾ ಮಹದೇವಪ್ರಸಾದ್, ಎಚ್.ಎಂ.ರೇವಣ್ಣ, ಆರ್.ಬಿ.ತಿಮ್ಮಾಪುರ್ ಅವರಿಗೆ ಸಚಿವ ಸ್ಥಾನ ದೊರೆತಿದೆ.  ನಾವು ಎಷ್ಟೇ ಪ್ರಯತ್ನ ಮಾಡಿದರೂ ನಮಗೆ ಸ್ಥಾನ ಸಿಕ್ಕಿಲ್ಲ ಎಂಬ ಅತೃಪ್ತಿ, ಅಸಮಾಧಾನ ಭುಗಿಲೆದ್ದಿದೆ.

Facebook Comments

Sri Raghav

Admin