ಸಚಿವರಾಗಿ ರೇವಣ್ಣ, ತಿಮ್ಮಾಪುರ್, ಗೀತಾ ಪ್ರಮಾಣ ವಚನ ಸ್ವೀಕಾರ, ಭರ್ತಿಯಾಯ್ತು ಸಿದ್ದು ಸಂಪುಟ

Ministers

ಬೆಂಗಳೂರು, ಸೆ.1- ಎಚ್.ಎಂ.ರೇವಣ್ಣ, ಆರ್.ಬಿ.ತಿಮ್ಮಾಪುರ್, ಗೀತಾ ಮಹದೇವಪ್ರಸಾದ್ ಅವರ ಸೇರ್ಪಡೆಯೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸಂಪುಟ ಭರ್ತಿಯಾಗಿದೆ. ರಾಜಭವನದಲ್ಲಿ ಇಂದು ನೂತನ ಸಚಿವರಾಗಿ ಎಚ್.ಎಂ.ರೇವಣ್ಣ, ಆರ್.ಬಿ.ತಿಮ್ಮಾಪುರ್, ಗೀತಾ ಮಹದೇವಪ್ರಸಾದ್ ಅವರು ರಾಜ್ಯಪಾಲ ವಿ.ಆರ್.ವಾಲಾ ಅವರು ಪ್ರಮಾಣವಚನ ಬೋಧಿಸಿದರು. ಎಚ್.ಎಂ.ರೇವಣ್ಣ, ಆರ್.ಬಿ.ತಿಮ್ಮಾಪುರ್ ಅವರು ಸಂಪುಟ ದರ್ಜೆಯ ಸಚಿವರಾಗಿ ,ಮೋಹನ್ ಎಂ. ಸಿ.ಮೋಹನ್ ಕುಮಾರಿ (ಗೀತಾ ಮಹದೇವಪ್ರಸಾದ್ ರಾಜ್ಯ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.

Minister-Cabinet

ಎಚ್.ಎಂ.ರೇವಣ್ಣ ಅವರು ದೇವರ ಹೆಸರಲ್ಲಿ, ಆರ್.ಬಿ.ತಿಮ್ಮಾಪುರ್ ಶ್ರದ್ಧಾ ಭಕ್ತಿಯ ಹೆಸರಲ್ಲಿ ಮತ್ತು ಎಂ. ಸಿ.ಮೋಹನ್ ಕುಮಾರಿ (ಗೀತಾ ಮಹದೇವಪ್ರಸಾದ್) ಅವರು ಮಲೆಮಹದೇಶ್ವರನ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಸಂಪುಟದ ಹಿರಿಯ ಸಚಿವರುಗಳು ಭಾಗವಹಿಸಿದ್ದರು.

ಮೂಲಗಳ ಪ್ರಕಾರ ರೇವಣ್ಣ ಅವರಿಗೆ ಅರಣ್ಯ ಖಾತೆ, ತಿಮ್ಮಾಪುರ್‍ಗೆ ಅಬಕಾರಿ ಸಂಪುಟ ದರ್ಜೆ ಖಾತೆ ದೊರೆತರೆ ಹಾಗೂ ಗೀತಾ ಮಹದೇವಪ್ರಸಾದ್ ಅವರಿಗೆ ಅವರ ಪತಿ ನಿರ್ವಹಿಸುತ್ತಿದ್ದ ಸಹಕಾರ ಖಾತೆಯನ್ನೇ ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ.

ಇದೇ ಸಂದರ್ಭದಲ್ಲಿ ರಾಜ್ಯ ಖಾತೆ ಸಚಿವರಾದ ಪ್ರಿಯಾಂಕ್‍ಖರ್ಗೆ, ಪ್ರಮೋದ್ ಮಧ್ವರಾಜ್, ರುದ್ರಪ್ಪಲಮಾಣಿ,ಈಶ್ವರ್ ಖಂಡ್ರೆ ಅವರನ್ನು ಸಂಪುಟ ದರ್ಜೆಗೆ ಸಚಿವರನ್ನಾಗಿ ನೀಡಲಾಗಿದೆ. ಇಂದು ಸಂಜೆ 5 ಗಂಟೆಗೆ ರಾಜಭವನದಲ್ಲಿ ನಡೆದ ಸರಳ ಸಮಾರಂಭದಲ್ಲಿ ನೂತನ ಸಚಿವರು ಪ್ರಮಾಣ ವಚನ ಸ್ವೀಕರಿಸಿದರು.

ಗೃಹ ಖಾತೆಯನ್ನು ರಮಾನಾಥ್ ರೈ ಅವರಿಗೆ ನೀಡಲಾಗುವುದು ಎಂದು ಹೇಳಲಾಗುತ್ತಿದ್ದು, ಆದರೆ, ಕೊನೆ ಕ್ಷಣದ ಬದಲಾವಣೆ ಏನಾಗುತ್ತದೆ ಎಂದು ಕಾದು ನೋಡಬೇಕಿದೆ. ಚ್.ಎಸ್.ಮಹದೇವಪ್ರಸಾದ್ ಅವರ ನಿಧನ, ಎಚ್.ವೈ.ಮೇಟಿ ಹಾಗೂ ಜಿ.ಪರಮೇಶ್ವರ್ ಅವರಿಂದ ತೆರವಾಗಿದ್ದ ಮೂರು ಸ್ಥಾನಗಳನ್ನು ಭರ್ತಿ ಮಾಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಒಂದು ತಿಂಗಳಿನಿಂದ ಕಸರತ್ತು ನಡೆಸಿದ್ದರು.

ಆಯಾ ಜಾತಿಯವರಿಗೆ ಈ ಸ್ಥಾನಗಳನ್ನು ನಿರ್ಧರಿಸಿದ್ದರು. ಈ ಹಿನ್ನೆಲೆಯಲ್ಲಿಯೇ ಸಚಿವ ಖಾತೆಯನ್ನು ಹಂಚಲಾಗಿದೆ. ಲಿಂಗಾಯಿತರ ಕೋಟಾದಲ್ಲಿ ಷಡಕ್ಷರಿ ಅವರಿಗೆ ಸಚಿವ ಸ್ಥಾನ ಸಿಗುತ್ತದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ, ಕೊನೆಯ ಕ್ಷಣದಲ್ಲಿ ಆದ ಬದಲಾವಣೆಯಿಂದ ಅವರಿಗೆ ಈ ಸ್ಥಾನ ಕೈ ತಪ್ಪಿದೆ.

Facebook Comments

Sri Raghav

Admin