ಅನಧಿಕೃತ ಡ್ರೋನ್‍ಗೆ ಕೊಕ್ಕೆ ಹಾಕಲು ಹೊಸ ಪ್ಲಾನ್

ಈ ಸುದ್ದಿಯನ್ನು ಶೇರ್ ಮಾಡಿ

Drone--01

ನವದೆಹಲಿ, ಸೆ.2-ಡ್ರೋನ್‍ನಂಥ ಮಾನವರಹಿತ ಹಾರುವ ಯಂತ್ರಗಳಿಂದ(ಯುಎವಿ) ಎಷ್ಟು ಅನುಕೂಲಗಳಿವೆಯೋ ಅಷ್ಟೇ ಅನಾನುಕೂಲಗಳೂ ಇವೆ. ಭಾರತದಲ್ಲಿ ಅನಧಿಕೃತವಾಗಿ ಡ್ರೋನ್ ಬಳಕೆ ಮತ್ತು ಹಾರಾಟಕ್ಕೆ ನಿಷೇಧವಿದೆ. ಆದಾಗ್ಯೂ ಇತ್ತೀಚಿನ ದಿನಗಳಲ್ಲಿ ಡ್ರೋನ್ ಅಥವಾ ಯುಎವಿ ಹಾವಳಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಅವುಗಳಿಗೆ ಲಗಾಮು ಹಾಕಲು ಕೇಂದ್ರ ಗೃಹ ಸಚಿವಾಲಯ ಹೊಸ ಯೋಜನೆಯೊಂದನ್ನು ರೂಪಿಸಿದೆ.  ಸಭೆ-ಸಮಾರಂಭಗಳಿರಲಿ ಅಥವಾ ಇತರೆ ಕಾರ್ಯಕ್ರಮಗಳೇ ಇರಲಿ ಅನುಮತಿ ಇಲ್ಲದೇ ಸಾರ್ವಜನಿಕರು ಡ್ರೋನ್‍ಗಳನ್ನು ಹಾರಿಸುತ್ತಾ 360 ಡಿಗ್ರಿ ಕೋನದಲ್ಲಿ ಚಿತ್ರೀಕರಣ ಅಥವಾ ಫೋಟೊಗಳನ್ನು ತೆಗೆಯುವ ಚಟುವಟಿಕೆಗಳು ಹೆಚ್ಚಾಗುತ್ತಿವೆ. ಇದರಿಂದ ಭದ್ರತೆಗೂ ದೊಡ್ಡ ಮಟ್ಟದ ಕಂಟಕ ಎದುರಾಗುತ್ತಿದೆ.

ಈ ಸಮಸ್ಯೆಗಳನ್ನು ಗಹನವಾಗಿ ಪರಿಗಣಿಸಿರುವ ಕೇಂದ್ರ ಗೃಹ ಸಚಿವಾಲಯ ಡ್ರೋನ್ ನಿಯಂತ್ರಣ ಅಧಿನಿಯಮವನ್ನು ಈ ತಿಂಗಳಲ್ಲಿ ಜಾರಿಗೊಳಿಸಲು ಉದ್ದೇಶಿಸಿದೆ. ಅಲ್ಲದೇ ಕಿರಿಕಿರಿ ಉಂಟು ಮಾಡುವ ಹಾರುವ ಯಂತ್ರಗಳಿಗೆ ಕೊಕ್ಕೆ ಹಾಕಲು ಅತ್ಯಾಧುನಿಕ ತಂತ್ರಜ್ಞಾನವೊಂದನ್ನೂ ಬಳಸಲು ಸಜ್ಜಾಗಿದೆ
ಜರ್ಮನಿಯ ಡಿಐಇಎಚ್‍ಎಲ್ ಸಂಸ್ಥೆಯಿಂದ ಅಧಿಕ ಶಕ್ತಿಶಾಲಿ ವಿದ್ಯುತ್ಕಾಂತ (ಎಲೆಕ್ಟ್ರೋಮ್ಯಾಗ್ನೆಟ್) ವ್ಯವಸ್ಥೆಯನ್ನು ಹೊಂದಲಿದೆ. ಈ ಸಿಸ್ಟಮ್‍ನಲ್ಲಿ ಒಂದು ರೇಡಾರ್, ರೇಡಿಯೊ ತರಂಗಾಂತರ ಜೂಮರ್ ಮತ್ತು ಡ್ರೋನ್ ಪತ್ತೆ ಮಾಡುವ ಡಿಟೆಕ್ಟರ್ ಇರುತ್ತದೆ. ಇವುಗಳನ್ನು ಬಳಸಿ ಹಾರುವ ಯಂತ್ರಗಳಿಗೆ ಕೊಕ್ಕೆ ಹಾಕಲು ಉದ್ದೇಶಿಸಲಾಗಿದೆ.

ಅಂದಹಾಗೇ ಈ ಅತ್ಯಾಧುನಿಕ ಉಪಕರಣಕ್ಕೆ ತಲಾ 8 ರಿಂದ 10 ಕೋಟಿ ರೂ. ವೆಚ್ಚವಾಗಲಿದೆ. ಭದ್ರತಾ ದೃಷ್ಟಿಯಿಂದಾಗಿ ಈ ಉಪಕರಣದ ಇತರ ಸಾಮಥ್ರ್ಯಗಳ ಬಗ್ಗೆ ಹೆಚ್ಚಿನ ವಿವರಗಳನ್ನು ನೀಡಿಲ್ಲ. ಸರ್ಕಾರ ಅನುಮೋದನೆ ನೀಡಿದ ನಂತರ ಅನಧಿಕೃತ ಡ್ರೋನ್‍ಗಳಿಗೆ ಕೊಕ್ಕೆ ಹಾಕುವ ಕೆಲಸ ಶುರುವಾಗಲಿದೆ.

Facebook Comments

Sri Raghav

Admin