ಈದ್ ಪ್ರಾರ್ಥನೆ ಬಳಿಕ ಕಾಶ್ಮೀರದಲ್ಲಿ ಹಿಂಸಾಚಾರ, ಹಲವರಿಗೆ ಗಾಯ

ಈ ಸುದ್ದಿಯನ್ನು ಶೇರ್ ಮಾಡಿ

Clashes Kashmir

ಶ್ರೀನಗರ, ಸೆ.2-ಬಕ್ರೀದ್ ಸಂದರ್ಭದಲ್ಲಿ ಕಣಿವೆ ರಾಜ್ಯ ಕಾಶ್ಮೀರದಲ್ಲಿ ಹಿಂಸಾಚಾರ ಭುಗಿಲೇಳಬಹುದೆಂಬ ಆತಂಕ ನಿಜವಾಗಿದೆ. ಈದ್ ಪ್ರಾರ್ಥನೆ ಬಳಿಕ ಜಮ್ಮು ಮತ್ತು ಕಾಶ್ಮೀರದ ವಿವಿಧೆಡೆ ಯುವಕರ ಗುಂಪು ಮತ್ತು ಭದ್ರತಾ ಪಡೆಗಳ ನಡುವೆ ಘರ್ಷಣೆಗಳು ನಡೆದು ಹಲವರು ಗಾಯಗೊಂಡಿದ್ದಾರೆ. ರಾಜಧಾನಿ ಶ್ರೀನಗರ, ಅನಂತನಾಗ್ ಮತ್ತು ಸೊಪೋರ್ ಸೇರಿದಂತೆ ವಿವಿಧೆಡೆ ಘರ್ಷಣೆ ಮತ್ತು ಹಿಂಸಾಚಾರಗಳು ನಡೆದಿರುವ ಬಗ್ಗೆ ವರದಿಯಾಗಿದೆ.

ಈ ಜಿಲ್ಲೆಗಳ ಈದ್ಗಾ ಮೈದಾನಗಳಲ್ಲಿ ಈದ್ ಸಾಮೂಹಿಕ ಪ್ರಾರ್ಥನೆಗಳು ನಡೆದ ನಂತರ ಯುವಕರು ಗುಂಪುಗೂಡಿ ಭದ್ರತಾಪಡೆಗಳು ಮತ್ತು ಪೊಲೀಸರತ್ತ ಕಲ್ಲುಗಳನ್ನು ತೂರಿ ದಾಂಧಲೆಗೆ ಇಳಿದರು. ಉದ್ರಿಕ್ತ ಗುಂಪನ್ನು ಚದುರಿಸಲು ಪೊಲೀಸರು ಲಾಠಿ ಪ್ರಹಾರ ಮಾಡಿ ಹೊಗೆ ಬಾಂಬ್‍ಗಳನ್ನು ಎಸದರು. ಈ ಸಂದರ್ಭದಲ್ಲಿ ನಡೆದ ಘರ್ಷಣೆಗಳಲ್ಲಿ ಯೋಧರೂ ಸೇರಿದಂತೆ ಅನೇಕರು ಗಾಯಗೊಂಡಿದ್ದಾರೆ.  ಅನಂತನಾಗ್ ಜಿಲ್ಲೆಯ ಜಂಗ್‍ಲತ್ ಮಂಡಿ, ಸೊಪೋರ್ ಜಾಮೀಯಾ ಮಸೀದಿ ಸೇರಿದಂತೆ ಉತ್ತರ ಮತ್ತು ದಕ್ಷಿಣ ಕಾಶ್ಮೀರದ ಹಲವೆಡೆ ಘರ್ಷಣೆಗಳು ನಡೆದಿದೆ.

ಉದ್ರಿಕ ಸ್ಥಳಗಳಿಗೆ ಹೆಚ್ಚುವರಿ ಪಡೆಗಳನ್ನು ನಿಯೋಜಿಸಲಾಗಿದ್ದು, ಪರಿಸ್ಥಿತಿ ಸದ್ಯಕ್ಕೆ ಹತೋಟಿಯಲ್ಲಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ. ಈದ್ ಸಂದರ್ಭದಲ್ಲಿ ಹಿಂಸಾಚಾರಕ್ಕೆ ಕುಮ್ಮಕ್ಕು ನೀಡಬಹುದೆಂಬ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ನಿನ್ನೆ ಜೆಕೆಎಲ್‍ಎಫ್ ನಾಯಕ ಯಾಸಿನ್ ಮಲ್ಲಿಕ್ ಹಾಗೂ ಹುರಿಯತ್ ಕಾನ್ಫೆರೆನ್ಸ್ ಮುಖಂಡರಾದ ಸೈಯದ್ ಅಲಿ ಶಾ ಗಿಲಾನಿ ಮತ್ತು ಮಿರ್ವಾಜ್ ಉಮರ್ ಫಾರೂಕ್ ಅವರನ್ನು ಪೊಲೀಸರು ಬಂಧಿಸಿದ್ದರು.

Facebook Comments

Sri Raghav

Admin