ಕಾರಿಗೆ ಬೆಂಕಿ ಬಿದ್ದು ಮೂವರು ಯುವಕರ ಸಜೀವ ದಹನ

ಈ ಸುದ್ದಿಯನ್ನು ಶೇರ್ ಮಾಡಿ

Car-Fire--01

ಗುರುಗ್ರಾಮ(ದೆಹಲಿ), ಸೆ.2-ಸಿಎನ್‍ಜಿ(ಕಂಪ್ರೆಸ್ಡ್ ನ್ಯಾಚುರಲ್ ಗ್ಯಾಸ್ ಅಥವಾ ಸಂಕುಚಿತ ಸ್ವಾಭಾವಿಕ ಅನಿಲ) ಅಳವಡಿಸಿದ್ದ ಮಾರುತಿ ಎಸ್ಟೀಮ್ ಕಾರಿಗೆ ಬೆಂಕಿ ಹೊತ್ತಿಕೊಂಡು ಮೂವರು ಯುವಕರು ಸುಟ್ಟು ಕರಕಲಾಗಿರುವ ಘಟನೆ ರಾಜಧಾನಿ ದೆಹಲಿ ಸಮೀಪದ ಗುರುಗ್ರಾಮದ(ಗುರ್‍ಗಾಂವ್) ಸೆಕ್ಟರ್-60ರಲ್ಲಿ ನಿನ್ನೆ ರಾತ್ರಿ ಸಂಭವಿಸಿದೆ.  ಈ ಮೂವರು ಯುವಕರು ಕಾರಿನೊಳಗೆ ಲಾಕ್ ಮಾಡಿಕೊಂಡು ಕುಳಿತ್ತಿದ್ದಾಗ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡಿದೆ. ಇದರಿಂದಾಗಿ ಅವರು ತಕ್ಷಣ ವಾಹನದಿಂದ ಹೊರಬರಲು ಸಾಧ್ಯವಾಗಲಿಲ್ಲ.

ದುರ್ಘಟನೆಯಲ್ಲಿ ಸುಟ್ಟು ಕರಕಲಾದವರನ್ನು ವಾಲ್ರಾ ಗ್ರಾಮದ ದೇವೇಂದ್ರ (38), ಗಜೇಂದ್ರ (38) ಮತ್ತು ನರೇಂದ್ರ (28) ಎಂದು ಗುರುತಿಸಲಾಗಿದೆ. ಈ ಯುವಕರು ಕಾರನ್ನು ನಿಲ್ಲಿಸಿ ಮದ್ಯ ಸೇವಿಸುತ್ತಿದ್ದರು ಎಂದು ತನಿಖೆಯಿಂದ ತಿಳಿದುಬಂದಿದೆ.

Facebook Comments

Sri Raghav

Admin