ಕುಖ್ಯಾತ ಶಾರ್ಪ್ ಶೂಟರ್ ಸುನಿಲ್ ಪೊಲೀಸ್ ಎನ್‍ಕೌಂಟರ್‍ಗೆ ಬಲಿ

ಈ ಸುದ್ದಿಯನ್ನು ಶೇರ್ ಮಾಡಿ

Sharpshooter

ಲಕ್ನೋ, ಸೆ.1- ನಗರದಲ್ಲಿ ಹಲವಾರು ಅಪರಾಧಗಳಲ್ಲಿ ಶಾಮೀಲಾಗಿದ್ದ ಕುಖ್ಯಾತ ಪಾತಕಿ ಶಾರ್ಪ್ ಶೂಟರ್ ಸುನಿಲ್ ಶರ್ಮ ಉತ್ತರ ಪ್ರದೇಶದ ರಾಜಧಾನಿ ಲಕ್ನೋದ ಗೋಮ್ತಿ ನಗರದಲ್ಲಿ ಪೊಲೀಸ್ ಗುಂಡಿಗೆ ಬಲಿಯಾಗಿದ್ದಾನೆ. ಪೊಲೀಸರೊಂದಿಗೆ ನಿನ್ನೆ ನಡೆದ ಎನ್‍ಕೌಂಟರ್‍ನಲ್ಲಿ ಸುನಿಲ್ ಹತನಾಗಿದ್ದಾನೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ. ಕಳೆದ ತಿಂಗಳು ಅಪರಾಧ ಪ್ರಕರಣವೊಂದಕ್ಕೆ ಸಂಬಂಧಪಟ್ಟಂತೆ ಪೊಲೀಸರು ಈತನನ್ನ ನ್ಯಾಯಾಲಯಕ್ಕೆ ಕರೆತರುತ್ತಿದ್ದಾಗ ತಪ್ಪಿಸಿಕೊಂಡು ಪರಾರಿಯಾಗಿದ್ದ. ಈತನಿಗಾಗಿ ತೀವ್ರ ಶೋಧ ನಡೆಸಲಾಗುತ್ತಿತ್ತು.

ಗೋಮ್ತಿ ನಗರದಲ್ಲಿ ಈತ ಇರುವ ಸುಳಿವು ಅರಿತು ಆ ಸ್ಥಳವನ್ನು ಪೊಲೀಸರು ಸುತ್ತುವರಿದಾಗ ಪರಾರಿಯಾಗಲು ಯತ್ನಿಸಿದ. ಈ ಸಂದರ್ಭದಲ್ಲಿ ಪೊಲೀಸರು ಗುಂಡು ಹಾರಿಸಿದಾಗ ಆತನೂ ಪ್ರತಿ ದಾಳಿ ನಡೆಸಿದ. ಕೆಲಕಾಲ ನಡೆದ ಎನ್‍ಕೌಂಟರ್ ನಂತರ ಶಾರ್ಪ್ ಶೂಟರ್ ಹತನಾದ.

Facebook Comments

Sri Raghav

Admin