ಕೆನ್ನೆತ್ ಜಸ್ಟರ್ ಭಾರತಕ್ಕೆ ಅಮೆರಿಕ ರಾಯಭಾರಿಯಾಗಿ ನೇಮಕ

ಈ ಸುದ್ದಿಯನ್ನು ಶೇರ್ ಮಾಡಿ

US-Am

ಭಾಷಿಂಗ್ಟನ್, ಸೆ.2-ಇಂಡಿಯಾ ಬಗ್ಗೆ ವಿಶೇಷ ಒಲವು ಹೊಂದಿರುವ ಕೆನ್ನೆತ್ ಐ ಜಸ್ಟರ್ ಭಾರತಕ್ಕೆ ಅಮೆರಿಕ ರಾಯಭಾರಿಯಾಗಿ ನೇಮಕಗೊಳ್ಳಲಿದ್ದಾರೆ. ಖ್ಯಾತ ಆರ್ಥಿಕ ತಜ್ಞರೂ ಆಗಿರುವ ಜಸ್ಟರ್ ಅವರನ್ನು ಈ ಹುದ್ದೆಗೆ ನೇಮಕ ಮಾಡಲು ತಾವು ಉದ್ದೇಶ ಹೊಂದಿರುವುದಾಗಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ್ದಾರೆ.  62 ವರ್ಷ ಜಸ್ಟರ್ ಭಾರತಕ್ಕೆ ಅಮೆರಿಕದ ರಾಯಭಾರಿ ಆಗಲಿದ್ದಾರೆ ಎಂದು ಕಳೆದ ಜೂನ್‍ನಲ್ಲೇ ಶ್ವೇತಭವನ ಪ್ರಕಟಿಸಿತ್ತು.

ಅಂತಾರಾಷ್ಟ್ರೀಯ ಆರ್ಥಿಕ ವ್ಯವಹಾರಗಳಿಗೆ ಅಮೆರಿಕ ಅಧ್ಯಕ್ಷರ ಉಪ ಸಹಾಯಕರು ಹಾಗೂ ರಾಷ್ಟ್ರೀಯ ಆರ್ಥಿಕ ಮಂಡಳಿಯ ಉಪ ನಿರ್ದೇಶಕರೂ ಆಗಿರುವ ಅವರು ರಿಚರ್ಡ್ ವರ್ಮ ಅವರ ಉತ್ತರಾಧಿಯಾಗಲಿದ್ಧಾರೆ. ಸೆನೆಟ್ ಅನುಮೋದನೆ ಬಳಿಕ ಅವರು ಹೊಸ ಹುದ್ದೆಯನ್ನು ವಹಿಸಿಕೊಳ್ಳಲಿದ್ದಾರೆ.

Facebook Comments

Sri Raghav

Admin