ಗುಂಡಿಗೆ ಬಿದ್ದು ತಾಯಿ-ಮಗ ಸಾವು

ಈ ಸುದ್ದಿಯನ್ನು ಶೇರ್ ಮಾಡಿ

Turuvekere--01

ತುರುವೇಕೆರೆ, ಸೆ.2- ಎಮ್ಮೆ ಮೇಯಿಸಲು ಕೆರೆ ಅಂಗಳಕ್ಕೆ ಹೋಗಿದ್ದ ತಾಯಿ, ಮಗ ಹೂಳು ತೆಗೆದು ನೀರು ತುಂಬಿದ್ದ ಗುಂಡಿಗೆ ಬಿದ್ದು ಸಾವನ್ನಪ್ಪಿರುವ ದಾರುಣ ಘಟನೆ ತಾಲ್ಲೂಕಿನ ಸೂಳೇಕೆರೆ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಚಂದ್ರಮ್ಮ ಹಾಗೂ ಇವರ ಮಗ ಜಗದೀಶ್ (30) ಮೃತಪಟ್ಟ ದುರ್ದೈವಿಗಳು.
ಗ್ರಾಮದ ಹೊರ ಭಾಗದ ಕೆರೆ ಅಂಗಳಕ್ಕೆ ಜಗದೀಶ್ ಎಮ್ಮೆ ಮೇಯಿಸಲು ಹೋಗಿದ್ದು, ಸಂಜೆ ಆದರೂ ಮನೆಗೆ ಬಾರದ ಕಾರಣ ತಾಯಿ ಚಂದ್ರಮ್ಮ ಈತನನ್ನು ಹುಡುಕಿಕೊಂಡು ಹೋಗಿದ್ದಾರೆ.

ಇಬ್ಬರೂ ರಾತ್ರಿಯಾದರೂ ಮನೆಗೆ ಬಾರದ ಕಾರಣ ಗಾಬರಿಗೊಂಡ ಕುಟುಂಬದವರು ಕೆರೆ ಅಂಗಳಕ್ಕೆ ಹೋಗಿ ನೋಡಿದಾಗ ಚಂದ್ರಮ್ಮಳ ಶವ ತೇಲುತ್ತಿದ್ದುದ್ದನ್ನು ಕಂಡು ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದಾರೆ. ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ತಾಯಿ ಹಾಗೂ ಮಗನ ಶವವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗೆ ಸಾರ್ವಜನಿಕ ಆಸ್ಪತ್ರೆಗೆ ಸಾಗಿಸಿದ್ದಾರೆ. ಜಗದೀಶ್‍ಗೆ ಇತ್ತೀಚೆಗಷ್ಟೇ ಮದುವಾಗಿದ್ದು, ಮಕ್ಕಳು ಇರಲಿಲ್ಲ. ಕುಟುಂಬಸ್ಥರ ರೋಧನ ಮುಗಿಲು ಮುಟ್ಟಿತ್ತು.   ಸ್ಥಳಕ್ಕಾಗಮಿಸಿದ ತುರುವೇಕೆರೆ ವೃತ್ತ ನಿರೀಕ್ಷಕ ಜಗದೀಶ್, ಪಿಎಸ್‍ಐ ನವೀನ್ ಕುಮಾರ್ ಹಾಗೂ ಸಿಬ್ಬಂದಿ ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

Facebook Comments

Sri Raghav

Admin