ಗೋರಖ್‍ಪುರ್‍ ಶಿಶುಗಳ ಸರಣಿ ಸಾವಿನ ಪ್ರಕರಣ : 3ನೇ ಆರೋಪಿ ಡಾ. ಖಲೀಫ್ ಖಾನ್ ಅರೆಸ್ಟ್

ಈ ಸುದ್ದಿಯನ್ನು ಶೇರ್ ಮಾಡಿ

Kahalif-Khan--01

ಲಕ್ನೋ ಸೆ.2-ಉತ್ತರಪ್ರದೇಶದ ಗೋರಖ್‍ಪುರ್‍ನ ಬಿಆರ್‍ಡಿ ಆಸ್ಪತ್ರೆಯಲ್ಲಿ ಶಿಶುಗಳ ಸರಣಿ ಸಾವು ಪ್ರಕರಣಕ್ಕೆ ಸಂಬಂಧಪಟ್ಟಂತೆ ಮೂರನೇ ಆರೋಪಿಯನ್ನು ಪೊಲೀಸರು ಇಂದು ಬೆಳಗ್ಗೆ ಬಂಧಿಸಿದ್ದಾರೆ. ಈ ಘಟನೆ ಹಿನ್ನೆಲೆಯಲ್ಲಿ ಆಸ್ಪತ್ರೆಯಿಂದ ವಜಾಗೊಂಡಿದ್ದ ಡಾ. ಖಲೀಫ್ ಖಾನ್‍ನನ್ನು ಗೋರಖ್‍ಪುರ್‍ನಲ್ಲಿ ಬಂಧಿಸಲಾಯಿತು ಎಂದು ವಿಶೇಷ ಕಾರ್ಯಪಡೆ (ಎಸ್‍ಟಿಎಫ್) ಮಹಾ ನಿರ್ದೇಶಕ ಅಮಿತಾಭ್ ಯಶ್ ಹೇಳಿದ್ದಾರೆ.

ಆ.10 ಮತ್ತು ಆ.11ರಂದು ಎರಡು ದಿನಗಳ ಅವಧಿಯಲ್ಲಿ 30 ಮಕ್ಕಳು ಮೃತಪಟ್ಟ ನಂತರ ಡಾ. ಖಾನ್‍ನನ್ನು ಕರ್ತವ್ಯಲೋಪಕ್ಕಾಗಿ ಸೇವೆಯಿಂದ ವಜಾಗೊಳಿಸಲಾಗಿತ್ತು. ಇವರು ಸರ್ಕಾರಿ ಒಡೆತನದ ಬಾಬಾ ರಾಘವ್ ದಾಸ್ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ 100 ಹಾಸಿಗೆಗಳ ಸಾಮಥ್ರ್ಯದ ಎಇಎಸ್ ವಾರ್ಡ್‍ನಲ್ಲಿ ನೋಡಲ್ ಆಫೀಸರ್ ಆಗಿದ್ದರು. ಆಸ್ಪತ್ರೆಯ ಮಾಜಿ ಪ್ರಾಂಶುಪಾಲ ರಾಜೀವ್ ಮಿಶ್ರಾ ಮತ್ತು ಅವರ ಪತ್ನಿಯನ್ನು ಎಸ್‍ಟಿಎಫ್ ಅಧಿಕಾರಿಗಳು ಆ.29ರಂದು ಬಂಧಿಸಿದ್ದರು.

Facebook Comments

Sri Raghav

Admin