ಗೋವಿಂದನ ದರ್ಶನ ಪಡೆದ ಕೋವಿಂದ್

ಈ ಸುದ್ದಿಯನ್ನು ಶೇರ್ ಮಾಡಿ

Kovind--01

ತಿರುಪತಿ, ಸೆ.2-ರಾಷ್ಟ್ರಪತಿ ರಾಮನಾಥ್ ಕೋವಿಂದ್ ಇಂದು ವಿಶ್ವವಿಖ್ಯಾತ ತಿರುಪತಿಗೆ ಭೇಟಿ ನೀಡಿದ ಶ್ರೀವೆಂಕಟೇಶ್ವರನಿಗೆ ವಿಶೇಷ ಪೂಜೆ ಸಲ್ಲಿಸಿದರು. ರಾಷ್ಟ್ರಪತಿ ಭೇಟಿ ಹಿನ್ನೆಲೆಯಲ್ಲಿ ವ್ಯಾಪಕ ಬಂದೋಬಸ್ತ್ ಮಾಡಲಾಗಿತ್ತು. ತಮ್ಮ ಪತ್ನಿ ಸವಿತಾ ಹಾಗೂ ಕುಟುಂಬದ ಇತರ ಸದಸ್ಯರೊಂದಿಗೆ ನಿನ್ನೆಯೇ ತಿರುಪತಿಗೆ ಆಗಮಿಸಿದ್ದರು. ಇಂದು ಬೆಳಗ್ಗೆ ತಿರುಮದಲ್ಲಿರುವ ಪ್ರಾಚೀನ ಗಿರಿದೇಗುಲ ಭೇಟಿ ನೀಡಿ ಪೂಜೆ ನೆರವೇರಿಸಿದರು.

ಒಂದು ಗಂಟೆ ಕಾಲ ಅವರು ಶ್ರೀವೆಂಕಟೇಶ್ವರನ ಸನ್ನಿಧಿಯಲ್ಲಿದ್ದರು. ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಮತ್ತು ರಾಜ್ಯಪಾಲ ಇ.ಎಸ್.ಎಲ್. ನರಸಿಂಹನ್ ಅವರು ರಾಷ್ಟ್ರಪತಿ ಅವರೊಂದಿಗಿದ್ದರು.  ಕಳೆದ ಜುಲೈನಲ್ಲಿ 14ನೇ ರಾಷ್ಟ್ರಪತಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಕೋವಿಂದ್ ಮೊದಲ ಬಾರಿಗೆ ತಿರುಪತಿಗೆ ಭೇಟಿ ನೀಡಿದ್ದಾರೆ.

Facebook Comments

Sri Raghav

Admin