ಡಿಕೆಶಿ ಅಥವಾ ಕುಮಾರಸ್ವಾಮಿ ಸಿಎಂ ಆಗೋದು ಅಷ್ಟು ಸುಲಭವಲ್ಲ : ದೇವೇಗೌಡ

ಈ ಸುದ್ದಿಯನ್ನು ಶೇರ್ ಮಾಡಿ

Devegowda--01

ಬೆಂಗಳೂರು. ಸೆ. 02 :  ರಾಜಕೀಯ ಜೀವನದಲ್ಲಿ ಮೊದಲಿನಿಂದಲೂ  ಶಿಕ್ಷೆ ಅನುಭವಿಸುತ್ತಲೇ ಬಂದಿದ್ದೇನೆ. ಸಿಎಂ ಆಗುವುದು ಅಷ್ಟು ಸುಲಭವಲ್ಲ,  ಡಿ.ಕೆ. ಶಿವಕುಮಾರ್, ಆರ್. ಅಶೋಕ್, ಕುಮಾರಸ್ವಾಮಿ ಸೇರಿದಂತೆ ಯಾರಾದ್ರೂ ಮುಖ್ಯಮಂತ್ರಿ ಆಗಲಿ. ಅವರರವರ ಹಣೆಬರಹ ಹೇಗಿದೆಯೋ.. ಅದೇ ಆಗಲಿ ಎಂದು ನಗರದ ಚಾಮರಾಜಪೇಟೆ ಕಿಮ್ಸ್‌ ಆಸ್ಪತ್ರೆ ಆವರಣದಲ್ಲಿರುವ ಕುವೆಂಪು ಕಲಾಕ್ಷೇತ್ರದಲ್ಲಿ ಕೃಷಿಕ್ ಸರ್ವೋದಯ ಫೌಂಡೇಶನ್ ಸಂಸ್ಥೆಯ ಬೆಳ್ಳಿ ಮಹೋತ್ಸವದಲ್ಲಿ   ಸಚಿವ ಡಿ.ಕೆ.ಶಿವಕುಮಾರ್‌ರನ್ನು ಉದ್ದೇಶಿಸಿ ಮಾಜಿ ಪ್ರಧಾನಿ ದೇವೇಗೌಡರು  ಹೇಳಿದರು.

ದೇವೇಗೌಡರ ಈ ಮಾತು ಕೇಳುತ್ತಿದ್ದಂತೆ ದೇವೇಗೌಡರ ಮುಖ ನೋಡಿ ಕೈ ಜೋಡಿಸಿ ನಮಸ್ಕರಿಸುತ್ತಲೇ ಡಿ.ಕೆ. ಶಿವಕುಮಾರ್ ಮುಗುಳ್ನಕ್ಕರು. ಮಾತು ಮುಂದುವರಿಸಿದ ದೇವೇಗೌಡರು, ಡಿಕೆಶಿಯವರಿಗೆ ಅಷ್ಟು ಸುಲಭವಾಗಿ ಮುಖ್ಯಮಂತ್ರಿಯಾಗಲು ಬಿಡ್ತಾರೆ ಅಂತ ತಿಳಿದುಕೊಳ್ಳಬೇಡಿ. ಅದು ಅಷ್ಟು ಸುಲಭ ಇಲ್ಲ. ನಾನು ಅನುಭವಿಸಿದ್ದನ್ನೇ ಹೇಳ್ತಿದ್ದೀನಿ. ನಾವು ಎರಡನೇ ದರ್ಜೆಯಲ್ಲಿದ್ದೇವೆ. ನಮ್ಮನ್ನು ಮೊದಲ ದರ್ಜೆಗೆ ಹೋಗೋಕೆ ಬಿಡಲ್ಲ ಎಂದು ಹೇಳಿದರು.

ಜೀವನದ ಕೊನೆ ದಿನಗಳಲ್ಲಿ ನಮ್ಮ ಒಕ್ಕಲಿಗ ಸಮಾಜ ಎಲ್ಲಿ ಸಾಗ್ತಿದೆ. ಕಾವೇರಿ ಕಣಿವೆಯಲ್ಲಿ ಜನರ ಪರಿಸ್ಥಿತಿ ಏನಾಗಿದೆ. ಕಾವೇರಿ ನದಿ ತೀರದಲ್ಲಿರುವ ಎರಡೂವರೆ ಕೋಟಿ ಜನರ ಬಗ್ಗೆ ಯೋಚಿಸ್ತಿದೀನಿ. ಆದರೆ ಕಾವೇರಿ ನೀರಿನ ಸಮಸ್ಯೆ ಪರಿಹಾರ ಮಾಡೋದು ನಮ್ಮಿಂದ ಆಗುತ್ತೋ ಇಲ್ವೋ ಗೊತ್ತಿಲ್ಲ. ಆದರೆ ಎಲ್ಲರೂ ಸೇರಿ ಪ್ರಯತ್ನಿಸೋಣ ಎಂದು ಕರೆ ಕೊಟ್ಟರು.

ಸಮಾರಂಭದಲ್ಲಿ ಇಂಧನ ಸಚಿವ ಡಿ.ಕೆ. ಶಿವಕುಮಾರ್‍ ಅವರನ್ನು ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿದ ನಂತರ ಡಿಕೆಶಿ ನೇರವಾಗಿ ಪಕ್ಕದಲ್ಲೇ ಇದ್ದ ಮಾಜಿ ಪ್ರಧಾನಿ ಹೆಚ್‍.ಡಿ. ದೇವೇಗೌಡರ ಕಾಲಿಗೆರಗಿ ಆಶೀರ್ವಾದ ಪಡೆದರು. ಸಭೆಯಲ್ಲಿ ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ ಸೇರಿದಂತೆ ಅನೇಕ ಗಣ್ಯರು ಭಾಗಿಯಾಗಿದ್ದರು.

WhatsApp Image 2017-09-02 at 10.46.46 PM (1)

WhatsApp Image 2017-09-02 at 10.46.46 PM

WhatsApp Image 2017-09-02 at 10.46.48 PM (1)

WhatsApp Image 2017-09-02 at 10.46.48 PM

WhatsApp Image 2017-09-02 at 10.46.50 PM (1)

WhatsApp Image 2017-09-02 at 10.46.50 PM

WhatsApp Image 2017-09-02 at 10.46.52 PM WhatsApp Image 2017-09-02 at 10.46.53 PM WhatsApp Image 2017-09-02 at 10.46.54 PM

Facebook Comments

Sri Raghav

Admin