ನೀಟ್ ವಿರುದ್ಧ ಹೋರಾಡಿ ಅನಿತಾ ಆತ್ಮಹತ್ಯೆ : ಪ್ರಧಾನಿ ವಿರುದ್ಧ ಆಕ್ರೋಶ

ಈ ಸುದ್ದಿಯನ್ನು ಶೇರ್ ಮಾಡಿ

Anitha--01

ಚೆನ್ನೈ, ಸೆ.22-ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆ (ನೀಟ್) ವಿರುದ್ಧ ಹೋರಾಟ ನಡೆಸಿದ್ದ ಪ್ರತಿಭಾವಂತ ವಿದ್ಯಾರ್ಥಿ ಅನಿತಾ (18) ಆತ್ಮಹತ್ಯೆ ಪ್ರಕರಣ ಈಗ ವಿವಾದದ ಸ್ವರೂಪ ಪಡೆಯುತ್ತಿದೆ. ತಮಿಳುನಾಡಿನ ಆಡಳಿತರೂಢ ಎಐಎಡಿಎಂಕೆ, ವಿರೋಧಪಕ್ಷಗಳು ಹಾಗೂ ಸಾರ್ವಜನಿಕರು ಪ್ರಧಾನಿ ನರೇಂದ್ರ ಮೋಧಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.  ಪ್ರತಿವಾವಂತ ವಿದ್ಯಾರ್ಥಿಗೆ ವೈದ್ಯಕೀಯ ಸೀಟು ಲಭಿಸದೆ ಸಾವಿಗೆ ಶರಣಾಗಲು ಕೇಂದ್ರ ಸರ್ಕಾರದ ಏಕಪಕ್ಷೀಯ ಧೋರಣೆಯೇ ಕಾರಣ ಎಂದು ಜನರು ಹಿಡಿಶಾಪ ಹಾಕುತ್ತಿದ್ದಾರೆ.

ನೀಟ್‍ನಿಂದ ತಮಿಳುನಾಡಿಗೆ ವಿನಾಯಿತಿ ನೀಡುವಂತೆ ಕೋರಿ ಅನಿತಾ ಸುಪ್ರೀಂಕೋರ್ಟ್‍ನಲ್ಲಿ ಅರ್ಜಿ ಸಲ್ಲಿಸಿದ್ದರು. ಆದರೆ ವಿನಾಯಿತಿ ನೀಡದಂತೆ ಕೇಂದ್ರ ಸರ್ಕಾರ ತಡೆಯೊಡ್ಡಿದ್ದರಿಂದ ತೀವ್ರ ಬೇಸರಗೊಂಡಿದ್ದ ಆಕೆ ಅಲಿಯಲೂರ್ ಜಿಲ್ಲೆಯ ಕುಲುಮುರ್ ತಾಲ್ಲೂಕಿನ ತನ್ನ ಗ್ರಾಮದಲ್ಲಿ ನೇಣಿಗೆ ಶರಣಾಗಿದ್ದರು.

Facebook Comments

Sri Raghav

Admin