ಪಾಕ್ ನಾಯಕನ ಹತ್ಯೆ ಯತ್ನ, ಮೂವರ ಸಾವು, ಅನೇಕರಿಗೆ ಗಾಯ

ಈ ಸುದ್ದಿಯನ್ನು ಶೇರ್ ಮಾಡಿ

Pakistan--01

ಕರಾಚಿ, ಸೆ.2- ಮುತ್ತಾಹಿದಾ ಖ್ವಾಮಿ ಮೂವ್‍ಮೆಂಟ್-ಪಾಕಿಸ್ತಾನ (ಎಂಕ್ಯುಎಂ-ಪಿ) ಪಕ್ಷದ ಮುಖಂಡ ಹಾಗೂ ಸಿಂಧ್ ಶಾಸನಸಭೈಯ ವಿರೋಧಪಕ್ಷದ ನಾಯಕ ಖ್ವಾಜಾ ಇಜರುಲ್ ಹಸನ್ ಹತ್ಯೆಗೆ ಇಂದು ವಿಫಲಯತ್ನ ನಡೆದಿದೆ. ಈ ಘಟನೆಯಲ್ಲಿ ಹಂತಕ ಸೇರಿದಂತೆ ಮೂವರು ಸಾವಿಗೀಡಾಗಿದ್ದಾರೆ
ಪಾಕಿಸ್ತಾನದ ಬಂದರು ನಗರಿ ಕರಾಚಿಯಲ್ಲಿ ಈದ್ ಪ್ರಾರ್ಥನೆ ಬಳಿಕ ಮನೆಗೆ ತೆರಳುತ್ತಿದ್ದ ಅವರ ಮೇಲೆ ಮೋಟಾರ್ ಸೈಕಲ್‍ನಲ್ಲಿ ಬಂದ ಹಂತಕರು ಗುಂಡು ಹಾರಿಸಿದರು. ಹತ್ಯೆ ಯತ್ನದಿಂದ ಹಸನ್ ಪಾರಾದರೂ ಮಗು ಮತ್ತು ಅಂಗರಕ್ಷಕನೊಬ್ಬ ಮೃತಪಟ್ಟು, ಕೆಲವರು ಗಾಯಗೊಂಡಿದ್ದಾರೆ.

ಪೊಲೀಸರು ನಡೆಸಿದ ಪ್ರತಿದಾಳಿಯಲ್ಲಿ ಹಂತಕನೊಬ್ಬ ಬಲಿಯಾಗಿದ್ದಾನೆ. ಗುಂಡೇಟಿನಿಂದ ಗಾಯಗೊಂಡಿರುವ ಹಸನ್‍ರ ನಾಲ್ವರು ಗಾರ್ಡ್‍ಗಳಲ್ಲಿ ಒಬ್ಬನ ಸ್ಥಿತಿ ಗಂಭೀರವಾಗಿದೆ.

Facebook Comments

Sri Raghav

Admin