ಪಾಕ್ ಸೇನೆ, ಉಗ್ರರು ನಡೆಸಿದ ದಾಳಿಯಲ್ಲಿ ಇಬ್ಬರು ಯೋಧರು ಹುತಾತ್ಮ,ಓರ್ವ ಉಗ್ರನ ಹತ್ಯೆ

ಈ ಸುದ್ದಿಯನ್ನು ಶೇರ್ ಮಾಡಿ

Firing--041

ಶ್ರೀನಗರ, ಸೆ.2-ಕಣಿವೆ ರಾಜ್ಯ ಕಾಶ್ಮೀರದಲ್ಲಿ ಈದ್ ಆಚರಣೆ ಸಂದರ್ಭದಲ್ಲೇ ಒಂದೆಡೆ ಪಾಕಿಸ್ತಾನಿ ಸೇನೆಯ ಅಪ್ರಚೋದಿತ ದಾಳಿ, ಇನ್ನೊಂದೆಡೆ ಭಯೋತ್ಪಾದಕರ ಅಟ್ಟಹಾಸ ಮುಂದುವರಿದಿದೆ. ಗಡಿಯಲ್ಲಿ ಪಾಕಿಸ್ತಾನಿ ಯೋಧರು ಮತ್ತು ಉಗ್ರಗಾಮಿಗಳು ನಡೆಸಿದ ಪ್ರತ್ಯೇಕ ದಾಳಿಗಳಲ್ಲಿ ಭದ್ರತಾ ಪಡೆಯ ಇಬ್ಬರು ಯೋಧರು ಹತರಾಗಿದ್ದು, ಅನೇಕರು ಗಾಯಗೊಂಡಿದ್ದಾರೆ. ಈ ಕೃತ್ಯಗಳಿಂದ ಆಕ್ರೋಶಗೊಂಡಿರುವ ಭಾರತೀಯ ಯೋಧರು ಪ್ರತಿದಾಳಿ ಮುಂದುವರಿಸಿದ್ದಾರೆ.

ಮತ್ತೊಂದೆಡೆ ಜಮ್ಮು ಮತ್ತು ಕಾಶ್ಮೀರದ ಕುಲ್ಗಾಂನಲ್ಲಿ ನಡೆದ ಎನ್‍ಕೌಂಟರ್‍ನಲ್ಲಿ ಉಗ್ರಗಾಮಿಯೊಬ್ಬ ಹತನಾಗಿದ್ದಾನೆ. ತಂತ್ರಿಪೋರಾ ಪ್ರದೇಶದಲ್ಲಿ ಉಗ್ರರು ಅಡಗಿದ್ದಾರೆಂಬ ಖಚಿತ ಸುಳಿವಿನ ಮೇರೆಗೆ ಯೋಧರು ಆ ಸ್ಥಳದಲ್ಲಿ ಶೋಧ ಮುಂದುವರಿಸುತ್ತಿದ್ದಾಗ. ಮರೆಯಲ್ಲಿದ್ದ ಉಗ್ರರು ಗುಂಡು ಹಾರಿಸಿದರು. ಯೋಧರು ಪ್ರತಿ ದಾಳಿ ನಡೆಸಿದಾಗ ಗುಂಡಿನ ಕಾಳಗ ಮುಂದುವರೆಯಿತು. ಇಂದು ಮುಂಜಾನೆ ಉಗ್ರನೊಬ್ಬ ಹತನಾಗಿದ್ದಾನೆ. ಈತನನ್ನು ಮಚಿವಾ ಗ್ರಾಮದ ಇಶ್ಫಾಕ್ ಪದ್ದಾರ್ ಎಂದು ಗುರುತಿಸಿಲಾಗಿದೆ. ಉಳಿದ ಉಗ್ರರ ಬೇಟೆ ಮುಂದುವರಿದಿದೆ.

ಎಎಸ್‍ಐ ಹುತಾತ್ಮ :

ಗಡಿ ನಿಯಂತ್ರಣ ರೇಖೆ (ಎಲ್‍ಒಸಿ) ಆಚೆಗಿನ ಅಜ್ಞಾತ ಸ್ಥಳದಿಂದ ಪಾಕಿಸ್ತಾನಿ ಸೇನೆ ನಿನ್ನೆ ರಾತ್ರಿ ನಡೆಸಿದ ಗುಂಡಿನ ದಾಳಿಯಲ್ಲಿ ಪಹರೆ ಕಾಯುತ್ತಿದ್ದ ಬಿಎಸ್‍ಎಫ್ ಸಹಾಯಕ ಸಬ್ ಇನ್ಸ್‍ಪೆಕ್ಟರ್ ಕಮಲ್‍ಜೀತ್ ಸಿಂಗ್ ಹುತಾತ್ಮರಾಗಿದ್ದಾರೆ. ಜ ಮ್ಮುವಿನಿಂದ ಸುಮಾರು 250 ಕಿ.ಮೀ.ದೂರದ ಪೂಂಚ್ ಜಿಲ್ಲೆಯ ಕೃಷ್ಣಘಾಟಿ ಎಂಬಲ್ಲಿ ಈ ಘಟನೆ ನಡೆದಿದೆ. ಗುಂಡೇಟಿನಿಂದ ತೀವ್ರ ಗಾಯಗೊಂಡ ಸಿಂಗ್ ಅವರಿಗೆ ಸೇನಾ ಶಿಬಿರದಲ್ಲಿ ಇಲಾಜು ಮಾಡಿದರೂ ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದರು ಎಂದು ಬಿಎಸ್‍ಎಫ್ ಅಧಿಕಾರಿಗಳು ಹೇಳಿದ್ದಾರೆ.

ಉಗ್ರರ ದಾಳಿಗೆ ಪೊಲೀಸ್ ಬಲಿ :

ಶ್ರೀನಗರದ ಹೊರವಲಯದಲ್ಲಿ ನಿನ್ನೆ ರಾತ್ರಿ ಭದ್ರತಾ ಸಿಬ್ಬಂದಿ ತೆರಳುತ್ತಿದ್ದ ಬಸ್ಸಿನ ಮೇಲೆ ಭಯೋತ್ಪಾದಕರು ನಡೆಸಿದ ದಾಳಿಯಲ್ಲಿ ಮುಖ್ಯಪೇದೆ ಕಿಶನ್‍ಲಾಲ್ ಎಂಬುವರು ಮೃತಪಟ್ಟು ಹಲವು ಯೋಧರು ಗಾಯಗೊಂಡರು. ಗಾಯಾಳು ಯೋಧರಾದ ಮೀರಾಜುದ್ದೀನ್, ಅಬ್ದುಲ್ ಹಮೀದ್ ಮತ್ತು ಶಬ್ಬೀರ್ ಅಹಮದ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಪಾಕಿಸ್ತಾನದ ನಿಷೇಧಿತ ಭಯೋತ್ಪಾದಕ ಸಂಘಟನೆ ಲಷ್ಕರ್-ಎ-ತೈಬಾ (ಎಲ್‍ಇಟಿ) ಈ ದಾಳಿಯ ಹೊಣೆ ಹೊತ್ತುಕೊಂಡಿದೆ.  ಬಕ್ರೀದ್ ಸಂದರ್ಭದಲ್ಲಿ ಕಾಶ್ಮೀರದ ಮೇಲೆ ಜೈಷ್-ಎ-ಮಹಮದ್ ಉಗ್ರರು ದಾಳಿ ನಡೆಸುವ ಸಾಧ್ಯತೆ ಇದೆ ಎಂದು ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಎಸ್.ಪಿ.ವೈದ್ ಮೊನ್ನೆಯಷ್ಟೇ ಹೇಳಿಕೆ ನೀಡಿದ್ದರು.

Facebook Comments

Sri Raghav

Admin