ಬಹು ಅಂಗಾಂಗ ವೈಫಲ್ಯದಿಂದ ನಟ ಲಂಬು ನಾಗೇಶ್ ನಿಧನ

ಈ ಸುದ್ದಿಯನ್ನು ಶೇರ್ ಮಾಡಿ

Lambu-Nagesh--01

ಬೆಂಗಳೂರು, ಸೆ.2- ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ ನಟ ಲಂಬು ನಾಗೇಶ್ ನಿಧನರಾಗಿದ್ದಾರೆ. ಗಜ, ನೀಲಕಂಠ, ಒಲವೇ, ಜೋಕ್‍ಫಾಲ್ಸ್, ದೇವರ ಮಕ್ಕಳು ಸೇರಿದಂತೆ ಹಲವಾರು ಚಿತ್ರಗಳಲ್ಲಿ ಹಾಗೂ ಧಾರಾವಾಹಿಗಳಲ್ಲಿ ಅವರು ನಟಿಸಿದ್ದರು. ಕೆಲವು ದಿನಗಳಿಂದ ಲಂಬು ನಾಗೇಶ್ ಅವರು ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದು, ಎಂ.ಎಸ್.ರಾಮಯ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಇವರು ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

ಮೂಲತಃ ಕೋಲಾರ ಜಿಲ್ಲೆಯ ಶ್ರೀನಿವಾಸಪುರದವರಾಗಿದ್ದು, ಬೆಂಗಳೂರಿನಲ್ಲೇ ನೆಲೆಸಿದ್ದರು. ಗಿರಿನಗರ ಸಮೀಪವಿರುವ ಸೀತಾ ಸರ್ಕಲ್ ನಿವಾಸದಲ್ಲಿ ನಾಗೇಶ್ ಅವರ ಅಂತಿಮ ದರ್ಶನಕ್ಕಿಡಲಾಗಿತ್ತು. ಸಂಜೆ ಬನಶಂಕರಿಯಲ್ಲಿನ ಚಿತಾಗಾರದಲ್ಲಿ ಅಂತ್ಯ ಸಂಸ್ಕಾರ ನೆರವೇರಿಸಲಾಯಿತು. ಲಂಬು ನಾಗೇಶ್ ಅವರು ಪತ್ನಿ, ಪುತ್ರಿ, ಬಂಧು-ಬಳಗ, ಅಪಾರ ಸ್ನೇಹಿತರು, ಅಭಿಮಾನಿಗಳನ್ನು ಅಗಲಿದ್ದಾರೆ.

Facebook Comments

Sri Raghav

Admin