ಬಿಹಾರ ಪ್ರವಾಹಕ್ಕೆ ಇಲಿಗಳು ಕಾರಣವಂತೆ..!

ಈ ಸುದ್ದಿಯನ್ನು ಶೇರ್ ಮಾಡಿ

Rat--01

ಪಾಟ್ನಾ, ಸೆ.2-ಬಿಹಾರದ 18 ಜಿಲ್ಲೆಗಳಲ್ಲಿ ಸಂಭವಿಸಿದ ಭಾರೀ ಮಳೆ ಮತ್ತು ಪ್ರವಾಹದಿಂದ 500ಕ್ಕೂ ಹೆಚ್ಚು ಮಂದಿ ಬಲಿಯಾಗಿ ಒಂದೂವರೆ ಕೋಟಿ ಜನ ಸಂತ್ರಸ್ತರಾಗಿರುವ ಸಂದರ್ಭದಲ್ಲೇ ಈ ಪ್ರಕೃತಿ ವಿಕೋಪದ ಕಾರಣಗಳ ಬಗ್ಗೆ ವಿಶ್ಲೇಷಣೆಗಳು ನಡೆಯುತ್ತಿವೆ.ಹಿಮಾಲಯ ರಾಷ್ಟ್ರ ನೇಪಾಳದಲ್ಲಿ ಉಂಟಾದ ಭಾರೀ ಪ್ರವಾಹ ಈ ಅನಾಹುತಕ್ಕೆ ಕಾರಣ ಎಂದು ಮುಖ್ಯಮಂತ್ರಿ ನಿತೀಶ್‍ಕುಮಾರ್ ಹೇಳಿದ್ದಾರೆ. ಆದರೆ ಜಲಸಂಪನ್ಮೂಲ ಸಚಿವ ಲಲ್ಲನ್‍ಸಿಂಗ್ ಅವರ ವಿಶ್ಲೇಷಣೆಯೇ ವಿಚಿತ್ರವಾಗಿದೆ.

ಕುಮ್ಲಾಬಾಲನ್ ನದಿಯ ದಂಡೆಯಲ್ಲಿ ಹೆಗ್ಗಣ ಹಾಗೂ ಇಲಿಗಳು ಭಾರೀ ಸಂಖ್ಯೆಯಲ್ಲಿದ್ದು, ಅವುಗಳು ಭೂಮಿಯನ್ನು ಕೊರೆದು ದೊಡ್ಡ ರಂಧ್ರಗಳನ್ನು ಮಾಡಿರುವ ಕಾರಣದಿಂದ ಪ್ರವಾಹದ ನೀರು ನುಗ್ಗಲು ಕಾರಣವಾಯಿತು. ನಮ್ಮ ಇಲಾಖೆ ಎಂಜಿನಿಯರ್‍ಗಳು ರಂಧ್ರಗಳನ್ನು 72 ಗಂಟೆಯೊಳಗೆ ಮುಚ್ಚಿದ್ದರಿಂದ ಭಾರೀ ಅನಾಹುತ ತಪ್ಪಿತು ಎಂದು ಸಮಜಾಯಿಷಿ ನೀಡಿದ್ದಾರೆ. ಸಚಿವರ ಈ ಹೇಳಿಕೆಯಿಂದ ಮುಖ್ಯಮಂತ್ರಿ ನಿತೀಶ್‍ಕುಮಾರ್ ಸರ್ಕಾರ ನಗೆಪಾಟಲಿಗೆ ಗುರಿಯಾಗಿದೆ.

Facebook Comments

Sri Raghav

Admin