ಬ್ಲಾಕ್ ಮನಿ ವಿರುದ್ಧ ಭಾರತದ ಹೋರಾಟಕ್ಕೆ ಬೆಂಬಲ ಘೋಷಿಸಿದ ಸ್ವಿಸ್ ಅಧ್ಯಕ್ಷೆ

ಈ ಸುದ್ದಿಯನ್ನು ಶೇರ್ ಮಾಡಿ

Black-Money--1

ನವದೆಹಲಿ, ಸೆ.2-ಕಪ್ಪು ಹಣ ವಿರುದ್ಧ ಭಾರತ ನಡೆಸುತ್ತಿರುವ ಹೋರಾಟಕ್ಕೆ ಬೆಂಬಲ ನೀಡಲು ತಮ್ಮ ದೇಶ ಬದ್ಧವಾಗಿದೆ ಎಂದು ಸ್ವಿಟ್ಜರ್‍ಲೆಂಡ್ ಅಧ್ಯಕ್ಷೆ ಡೋರಿಸ್ ಲ್ಯೂಥಾರ್ಡ್ ಹೇಳಿದ್ದಾರೆ.  ಉಭಯ ದೇಶಗಳ ನಡುವೆ ರಾಜತಾಂತ್ರಿಕ ಸಂಬಂಧ ವೃದ್ಧಿಯಾಗಿ 70 ವರ್ಷಗಳು ಪೂರ್ಣಗೊಂಡ ಹಿನ್ನೆಲೆಯಲ್ಲಿ ದೆಹಲಿಯ ಸ್ವಿಸ್ ರಾಯಭಾರಿ ಕಚೇರಿಯಲ್ಲಿ ನಿನ್ನೆ ರಾತ್ರಿ ನಡೆದ ಸಮಾರಂಭದಲ್ಲಿ ಮಾತನಾಡಿದ ಅವರು, ಸಂಬಂಧಪಟ್ಟ ಮಾಹಿತಿಗಳ ವಿನಿಮಯ ಮೂಲಕ ಕಾಳಧನ ವಿರುದ್ಧ ಸಮರ ಸಾರಿರುವ ಭಾರತಕ್ಕೆ ಅಗತ್ಯವಾದ ಎಲ್ಲ ಸಹಕಾರ ನೀಡುವುದಾಗಿ ಭರವಸೆ ನೀಡಿದರು.

ಭಾರತವು ಸ್ವಿಸ್‍ಗೆ ಒಳ್ಳೆಯ ಮಿತ್ರ ರಾಷ್ಟ್ರ. ಈ ಏಳು ದಶಕಗಳ ಉತ್ತಮ ಬಾಂಧವ್ಯದಲ್ಲಿ ನಾವು ಸಹಕಾರ, ಅಭಿಪ್ರಾಯ. ಸಲಹೆಗಳನ್ನು ಪರಸ್ಪರರ ಹಂಚಿಕೊಂಡಿದ್ದೇವೆ. ನಮ್ಮ ನಡುವಿನ ಇಂದಿನ ಈ ಸದೃಢ ಸಂಬಂಧಕ್ಕೆ ಇದೇ ಭದ್ರ ಬುನಾದಿಯಾಗಿದೆ ಎಂದು ಅಧ್ಯಕ್ಷರು ಹೇಳಿದರು.

Facebook Comments

Sri Raghav

Admin