‘ರಾಹುಲ್‍’ಗೆ ಹೆಣ್ಣು ಕೊಡೋದಿರಲಿ, ಮೊದಲು ಮೋದಿ ಫ್ಯಾಮಿಲಿ ಸರಿ ಮಾಡಿ’

ಈ ಸುದ್ದಿಯನ್ನು ಶೇರ್ ಮಾಡಿ

Rahul--014

ಬೆಂಗಳೂರು, ಸೆ.2-ರಾಹುಲ್‍ಗಾಂಧಿಗೆ ಹೆಣ್ಣನ್ನು ಕೊಡೋದು, ತರುವುದರ ಬಗ್ಗೆ ಆಮೇಲೆ ಯೋಚನೆ ಮಾಡೋಣ.ಮೊದಲು ರಾಜ್ಯ ಬಿಜೆಪಿ ನಾಯಕರು ಮೋದಿ ಜೊತೆ ಅವರ ಹೆಂಡತಿಯನ್ನು ಒಂದುಗೂಡಿಸಲಿ ಎಂದು ವಿಧಾನಪರಿಷತ್ ಸದಸ್ಯ ರಿಜ್ವಾನ್ ಅರ್ಷದ್ ತಿರುಗೇಟು ನೀಡಿದ್ದಾರೆ. ಚಾಮರಾಜಪೇಟೆ ಈದ್ಗಾ ಮೈದಾನದಲ್ಲಿ ಬಕ್ರೀದ್ ಅಂಗವಾಗಿ ಏರ್ಪಡಿಸಿದ್ದ ಸಾಮೂಹಿಕ ಪ್ರಾರ್ಥನೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೋದಿ ಅವರ ಕುಟುಂಬ ಒಂದುಗೂಡಿಸಿದ ಮೇಲೆ ರಾಹುಲ್ ಅವರ ಕುರಿತು ಯೋಚನೆ ಮಾಡಲಿ. ಪಾಪ… ಮೋದಿ ಅವರ ಪತ್ನಿ ಅವರಿಗಾಗಿ ಕಾಯುತ್ತಿದ್ದಾರೆ ಎಂದು ಹೇಳಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ, ಪರಮೇಶ್ವರ್ ಅವರ ನಡುವೆ ಯಾವುದೇ ಅಸಮಾಧಾನ ಇಲ್ಲ. ಕೆಪಿಸಿಸಿ ಅಧ್ಯಕ್ಷರು, ಕಾರ್ಯಾಧ್ಯಕ್ಷರು ತುಂಬಾ ಬ್ಯುಸಿಯಾಗಿದ್ದಾರೆ. ಕಾರ್ಯಭಾರ ಒತ್ತಡದಿಂದ ಪ್ರಮಾಣ ವಚನ ಕಾರ್ಯಕ್ರಮಕ್ಕೆ ಪರಮೇಶ್ವರ್ ಗೈರಾಗಿದ್ದರಷ್ಟೆ ಎಂದು ಸಮರ್ಥನೆ ನೀಡಿದರು. ಶಾಸಕ ಜಮೀರ್ ಅಹಮದ್ ಮಾತನಾಡಿ, ಇಂದು ಬೆಳಗ್ಗೆ 4 ಗಂಟೆಯಿಂದ ಮಳೆ ಶುರುವಾಗಿ ತೊಂದರೆಯಾಯಿತು. ಇಲ್ಲಿ ವ್ಯವಸ್ಥೆ ಸರಿಹೋಗಲಿಲ್ಲ. ಅದಕ್ಕೆ ನಾವೇ ಮುಖ್ಯಮಂತ್ರಿಯವರಿಗೆ ಬರಬೇಡಿ ಎಂದು ಮನವಿ ಮಾಡಿದ್ದೆವು. ಮಳೆ ಆದ್ರೂ ಪರವಾಗಿಲ್ಲ ಬರುತ್ತೇನೆ ಎಂದು ಹೊರಟಿದ್ದರು. ಈಗ ನಾವೇ ಅವರ ಮನೆಗೆ ಹೋಗಿ ಸಿಹಿ ಕೊಟ್ಟು ಗೌರವ ಸಮರ್ಪಿಸಿ ಬರುತ್ತೇವೆ ಎಂದು ಹೇಳಿದರು.

Facebook Comments

Sri Raghav

Admin