ಸುದೀಪ್ ಹೇಳಿದ ಹಾಗೆಯೇ ಹುಟ್ಟುಹಬ್ಬ ಆಚರಿಸಿದ ಅಭಿಮಾನಿಗಳು

ಈ ಸುದ್ದಿಯನ್ನು ಶೇರ್ ಮಾಡಿ

Kichcha--01

ಬೆಂಗಳೂರು, ಸೆ.2- ನಟ ಕಿಚ್ಚ ಸುದೀಪ್ ಗೆ ಇಂದು 44ನೆ ಹುಟ್ಟುಹಬ್ಬದ ಸಂಭ್ರಮ. ಆದರೆ, ಈ ಸಂಭ್ರಮವನ್ನು ಅದ್ಧೂರಿಯಾಗಿ ಆಚರಿಸಿಕೊಳ್ಳದೆ ಸರಳವಾಗಿ ಆಚರಿಸಿಕೊಂಡಿದ್ದು ಈ ಬಾರಿಯ ವಿಶೇಷವಾಗಿತ್ತು.ಮಾಮೂಲಿಯಂತೆ ಅಭಿಮಾನಿಗಳು ನೆಚ್ಚಿನ ನಟನಿಗೆ ಶುಭಾಶಯ ಕೋರಿದರು. ಆದರೆ, ಎಲ್ಲಿಯೂ ವೈಭವ ಕಾಣಲಿಲ್ಲ.  ನನ್ನ ಹುಟ್ಟುಹಬ್ಬಕ್ಕೆ ಅನಗತ್ಯವಾಗಿ ವೆಚ್ಚ ಮಾಡುವ ಹಣವನ್ನು ಒಳ್ಳೆಯ ಸಾಮಾಜಿಕ ಕೆಲಸಕ್ಕೆ ಬಳಸಿಕೊಳ್ಳಿ. ನಿಮ್ಮ ನೆರವು ಸಾರ್ವಜನಿಕರಿಗೆ ಉಪಯೋಗಕ್ಕೆ ಬರಲಿ. ಅದೇ ನೀವು ನಮಗೆ ಕೊಡುವ ಹುಟ್ಟುಹಬ್ಬದ ಉಡುಗೊರೆ ಎಂದು ಅಭಿಮಾನಿಗಳಲ್ಲಿ ಮನವಿ ಮಾಡಿದರು.

ಸ್ಪರ್ಷ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಸುದೀಪ್ ಅವರು ಕಿಚ್ಚ , ಹುಚ್ಚ, ಜಸ್ಟ್ ಮಾತ್ ಮಾತಲ್ಲಿ, ರನ್ನ, ವೀರ ಮದಕರಿ, ಕೆಂಪೇಗೌಡ, ಬಚ್ಚನ್, ಕೋಟಿಗೊಬ್ಬ-2, ಮಾಣಿಕ್ಯ, ಮೈ ಆಟೋಗ್ರಾಫ್, ವಿಷ್ಣುವರ್ಧನ, ಮುಕುಂದ ಮುರಾರಿ ಸೇರಿದಂತೆ ಹಲವಾರು ಚಿತ್ರಗಳನ್ನು ನೀಡಿದ್ದಾರೆ.  ಪ್ರೇಮ್ ನಿರ್ದೇಶನದ ದಿ.ವಿಲನ್ ಚಿತ್ರದ ಚಿತ್ರೀಕರಣದ ಸಂದರ್ಭದಲ್ಲಿ ಅಭಿಮಾನಿಗಳಿಗೆ ಸುದೀಪ್ ತಮ್ಮ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಣೆ ಮಾಡಿಕೊಳ್ಳಲು ಇಚ್ಛಿಸುವುದಿಲ್ಲ ಎಂದು ಹೇಳಿದರು.

ಈ ಹಿನ್ನೆಲೆಯಲ್ಲಿ ಅಖಿಲ ಕರ್ನಾಟಕ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಸೇವಾ ಸಮಿತಿ ವತಿಯಿಂದ ಇಂದು ಮಧ್ಯಾಹ್ನ 12 ಗಂಟೆಗೆ ರಕ್ತದಾನ ಶಿಬಿರ, ಅನ್ನದಾನ ಹಾಗೂ ಉಚಿತ ಆರೋಗ್ಯ ತಪಾಸಣೆ ಹಮ್ಮಿಕೊಳ್ಳಲಾಗಿದೆ. ಸತಸೃಂಗ ವಿದ್ಯಾಸಂಸ್ಥೆಯ ವಿಕಲಚೇತನ ಅನಾಥ ಮಕ್ಕಳಿಗೆ ಧನ ಸಹಾಯ, ಸಂರಕ್ಷಣಾ ಚಾರಿಟಬಲ್ ಟ್ರಸ್ಟ್‍ನ ಅನಾಥಾಶ್ರಮ ಮತ್ತು ಸಿಟಿಜನ್‍ನ ಸೇವಾಶ್ರಮ ಅನಾಥಾಶ್ರಮಕ್ಕೆ ಧನ ಸಹಾಯ ಮಾಡುವ ಮೂಲಕ ತನ್ನ ನೆಚ್ಚಿನ ನಟನ ಹುಟ್ಟುಹಬ್ಬವನ್ನು ಅಭಿಮಾನಿಗಳು ಆಚರಿಸಿದರು. ಕಿಚ್ಚ ಸುದೀಪ್ ಅವರ ಹುಟ್ಟುಹಬ್ಬದ ಅಂಗವಾಗಿ ಪ್ರೇಮ್ ನಿರ್ದೇಶನದ ದಿ ವಿಲನ್ ಚಿತ್ರದ ಟೀಸರ್ ಕೂಡ ಬಿಡುಗಡೆಗೊಂಡಿದೆ.

Facebook Comments

Sri Raghav

Admin